
ಕೆಜಿಎಫ್,ಏ,೬-ದಾಖಲೆ ಇಲ್ಲದ ೧.೫೫ ಲಕ್ಷ ರೂ.ಗಳನ್ನು ಕೆಂಪಾಪುರದ ಚೆಕ್‌ಪೋಸ್ಟ್‌ನಲ್ಲಿ ಎಸ್‌ಎಸ್‌ಟಿ ತಂಡವು ವಶಪಡಿಸಕೊಂಡಿದೆ.
ಸೋಮವಾರ ರಾತ್ರಿ ೯.೧೫ ರಲ್ಲಿ ಆಂಧ್ರಪ್ರದೇಶದ ಪೊಗರಪಲ್ಲಿಯ ಮಧುಸೂದನ್‌ರೆಡ್ಡಿ ದ್ವಿಚಕ್ರವಾಹನದಲ್ಲಿ ೧.೫೫.೫೦೦ ರೂ.ಗಳನ್ನು ದ್ವೀಚಕ್ರ ವಾಹನದ ಶೀಟ್‌ನ ಕೆಳೆಗೆ ಬಚ್ಚಿಡಲಾಗಿತ್ತು, ತಪಾಸಣೆ ತಂಡದ ಚಂದ್ರಶೇಖರ್ ಹಣದ ದಾಖಲೆ ಕೇಳಿದ್ದು ಸೂಕ್ತ ದಾಖಲೆಗಳು ಇಲ್ಲದ ಕಾರಣ ಹಣ ಮತ್ತು ಬೈಕ್‌ನ್ನು ವಶಪಡಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ರಾಜಪೇಟೆ ಚೆಕ್‌ಪೋಸ್ಟ್‌ನಲ್ಲಿ ಒಂದು ಲಕ್ಷ ವಶ:
ಕ್ಯಾಸಂಬಳ್ಳಿ ಪೊಲೀಸ್‌ರು ರಾಜಪೇಟೆಯ ಚೆಕ್‌ಪೋಸ್ಟ್‌ನಲ್ಲಿ ಎಸ್‌ಎಸ್‌ಟಿ ತಂಡ ದಾಖಲೆ ಇಲ್ಲದೆ ೧.೬೪ ಲಕ್ಷ ರೂ.ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ಸಂಜೆ ೪.೩೦ ರಲ್ಲಿ ಕೆಜಿಎಫ್ ನಿವಾಸಿಯಾದ ಅನೀಶ್ ಮಿನಿಟೆಂಪೋಂದರ ತಪಾಸಣೆ ಮಾಡಿದ ಎಸ್‌ಎಸ್‌ಟಿ ತಂಡಕ್ಕೆ ದಾಖಲೆ ಇಲ್ಲದ ೧.೬೪೩೦ ರೂ.ಗಳನ್ನು ಕಂಡು ಬಂದಿದ್ದು, ಹಣಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸದ ಹಿನ್ನಲೆಯಲ್ಲಿ ಎಸ್‌ಎಸ್‌ಟಿ ತಂಡದ ಅಧಿಕಾರಿ ಸುನಿಲ್‌ಕುಮಾರ್ ಪ್ರಕರಣವನ್ನು ದಾಖಲಿಸಿ ಟೆಂಪೋ ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.