ದಾಖಲೆಗಳನ್ನ ತಿದ್ದಿ ತಿರುಚುವ ಅಭ್ಯಾಸ ನನಗಿಲ್ಲ; ಹೆಚ್.ಪಿ ರಾಜೇಶ್

ಜಗಳೂರು.ನ.೨೦; ಶಾಸಕ ಎಸ್.ವಿ.ರಾಮಚಂದ್ರ ಅವರು ಆಸ್ತಿ ವಿಚಾರವಾಗಿ ನಿಗದಿ ಮಾಡಿರುವ ಸಭೆಗೆ ತರಳುಬಾಳು ಸಿರಿಗೆರೆ ಮಠಕ್ಕೆ ಬರಲು ಸಿದ್ದ ದಿನಾಂಕ ಅವರೇ ನಿಗದಿಗೊಳಿಸಲಿ ಎಂದು ಮಾಜಿ ಶಾಸಕರ ಹೆಚ್.ಪಿ.ರಾಜೇಶ್ ಪ್ರತಿ ಸವಾಲು ಹಾಕಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ನನ್ನ ಆಸ್ಥಿ ಬಗ್ಗೆ ಚರ್ಚೆ ಮಾಡಲು ಸಿರಿಗೆರೆ ಶ್ರೀಗಳ ಮಠಕ್ಕೆ ಬರಲು ಹೇಳಿದ್ದು ಸ್ವಾಗತ ಆದರೆ ವಕೀಲರನ್ನ  ಕರೆತರುವ  ಅಗತ್ಯ ಇಲ್ಲ ಶ್ರೀ ಮಠದ ಭಕ್ತರೇ ನಮಗೆ ನ್ಯಾಯದ ಬಗ್ಗೆ ಚರ್ಚೆ ಮಾಡುವಂತಹ ಬುದ್ದಿವಂತರು ಇದ್ದಾರೆ  ಹಾಲಿ ಶಾಸಕರಿಗೆ ದಾಖಲೆಗಳನ್ನ ತಿದ್ದಿ ತಿರುಚುವ ಅಭ್ಯಾಸ ಇದೆ  ಎಲ್ಲೆಲ್ಲಿ ಯಾವಾಗ ಯಾವ ದಾಖಲಾತಿಗಳನ್ನ ತಿದ್ದುಪಡಿ ಮಾಡಿದ್ದಾರೆ ಎಂಬುದು ಸಹ ಗೊತ್ತಿದೆ  ಅದಕ್ಕಾಗಿ ವಕೀಲರ ಮಧ್ಯಸ್ಥಿಕೆ ಬಯಸುತ್ತಿದ್ದಾರೆ. ನನಗೆ ದಾಖಲಾತಿಗಳನ್ನ ತಿದ್ದುವ ಅಭ್ಯಾಸ ಇಲ್ಲ‌ ಇರುವಂತಹ ದಾಖಲಾತಿಗಳನ್ನೆ ತರುತ್ತೇನೆ ನನ್ನ ಅಕ್ರಮ ಆಸ್ತಿ ಬಗ್ಗೆ ಇದ್ದರೆ ಅವರು ಹೇಳಲಿ ನಾನು ಅವರ ಅಕ್ರಮದ ಬಗ್ಗೆ ಹೇಳುತ್ತೇನೆ   ನನಗೆ ವಕೀಲರು ಅನಿವಾರ್ಯವಿಲ್ಲ ಶಾಸಕರ ಸಯಮಕ್ಕಾಗಿ ಸಿದ್ದ ತಡ ಮಾಡದೇ ಆದಷ್ಟು ಬೇಗ ಈ ಕೆಲಸ‌ಮಾಡಲಿ ಎಂದರು.ಅಭಿವೃದ್ದಿ ಬಗ್ಗೆ ಚಕಾರ ಎತ್ತದೆ ಸುಳ್ಳು ದಾಖಲೆಗಳ ಪುಸ್ತಕ ನೀಡಿ ಮಾಧ್ಯಮಗಳಿಗೆ ಕೊಟ್ಟರೆ ಜನ ಒಪ್ಪಲಾರರು ಮಠದಲ್ಲಿಯೇ ಅಬಿವೃದ್ದಿ ‌ಬಗ್ಗೆ ಚರ್ಚೆಗೆ ಸಿದ್ದ ಅವರು ಪ್ರಾಮಾಣಿಕ‌ವಾಗಿದ್ದರೆ ಪಟ್ಟಣದಲ್ಲಿ ಶುದ್ದ ನೀರು ಘಟಕ ನೀಡಿದ್ದಾರಿಯೇ ಒಂದು ವಸತಿ‌ ನೀಡಿದ್ದಾರಿಯೇ ದಾಖಲೆ ಕೊಡಿ ವಯುಕ್ತಿಕ ವಿಚಾರಗಳು ಬಂದರೆ ನಿಮ್ಮ ವಿಚಾರಗಳು ನಮಗೆ ಸಹ ಪ್ರತಿಯೊಂದು ಗೊತ್ತಿದ್ದೆ ಚರ್ಚೆಗೆ ಬಂದರೆ ಸ್ವಾಗತಾರ್ಹ ಶಾಸಕರ ಹೇಳಿಕೆಗೆ ಮಾತ್ರ ಪ್ರತಿಕ್ರಿಯೆ ಕೊಡಬಲ್ಲೆ ಮುಂದಿನ ದಿನಗಳಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರು  ಅಂತವರಿಗೆ    ಉತ್ತರಿಸುತ್ತಾರೆ  ಎಂದು ತಿಳಿಸಿದರು.    ಕೆಪಿಸಿಸಿ ಎಸ್ಟಿ ಘಟಕ‌ ರಾಜ್ಯಾಧ್ಯಕ್ಷರು ಕೆ.ಪಿ.ಪಾಲಯ್ಯ ಮಾತನಾಡಿ  ಕೃಷಿಕಾಯ್ದೆ ವಿರೋಧಿಸಿ ಸತತ ವರ್ಷಗಳಿಂದ ರೈತರು ನೆಡೆಸಿದ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಈ ಕಾಯ್ದೆಗಳು ರೈತ ವಿರೋದಿ ಕಾಯ್ದೆ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧೀ ಎಚ್ಚರಿಸಿದ್ದರು ಆದರೆ ಪ್ರದಾನಿ ಇದನ್ನ ರಾಜಕೀಯ ಗೊಳಿಸಿ ನಿರ್ಲಕ್ಷ ಮಾಡಿದ್ದರಿ ರೈತರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿ ಅವರ ಬೆನ್ನೆಲುಬಾಗಿ ಹೊರಾಟಕ್ಕೆ ಕೈಜೋಡಿಸಿದ್ದು ಇಂದು ನ್ಯಾಯ ಸಿಕ್ಕಂತಾಗಿದೆ ಎಂದರು .                ಈ ವೇಳೆ   ಬ್ಲಾಕ್ ಸಂಯೋಜಕರು ಕಲ್ಲೇಶ್ ರಾಜ್ ಪಟೇಲ್ . ಜಿಲ್ಲಾ ಉಪಾಧ್ಯಕ್ಷರು ಗೋಡೆ ಪ್ರಕಾಶ್ ರಾಜ್ಯ ಎಸ್ಸಿ ಘಟಕಸದಸ್ಯ ಸಿ‌.ತಿಪ್ಪೇಸ್ವಾಮಿ. ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ. ಮುಖಂಡರಾದ ಬಿ.ದೇವೇಂದ್ರಪ್ಪ. ಎಸ್ಟಿ ಘಟಕ ಅಧ್ಯಕ್ಷರು ಬಿ.ಲೋಕೇಶ್. ಎಸ್ಸಿಘಟಕ ಅಧ್ಯಕ್ಷರು ವೆಂಕಟೇಶ್. ಮಹಿಳಾ ಘಟಕ ಅಧ್ಯಕ್ಷರು ಕೆಂಚಮ್ಮ. ಅರಸೀಕೆರೆ ಬ್ಲಾಕ್ ಹನುಮಕ್ಕ. ಪ.ಪಂ.ಸದಸ್ಯ ರವಿಕುಮಾರ್ ,  ಪಿ.ರೇವಣ್ಣ ಇದ್ದರು