ದಾಖಲಾತಿಗಳಿಲ್ಲದ 3 ಲಕ್ಷ ರೂ ಜಪ್ತಿ

ಅಥಣಿ : ಮಾ.26:ಅಥಣಿ ಪೆÇಲೀಸ ಠಾಣಾ ವ್ಯಾಪ್ತಿಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಮದಭಾವಿ ಖಟಾವ ಗಡಿ ಗ್ರಾಮದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಶಾಂತಿ ಸುವ್ಯವಸ್ಥೆ ಹಾಗೂ ನಿಷ್ಪಕ್ಷಪಾತವಾಗಿ ನಡೆಯುವಂತೆ ಮಾಡಲು ಈಗಾಗಲೇ ಪೆÇಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ವತಿಯಿಂದ ಚೆಕ್ ಪೆÇೀಸ್ಟ್ ಸ್ಥಾಪಿಸಲಾಗಿದ್ದು ವಾಹನಗಳ ತಪಾಸಣೆ ಚುರುಕುಗೊಂಡಿದೆ ನಿನ್ನೆ 25-03-2023 ರಂದು ಮದ್ಯಾಹ್ನ 12-35 ಗಂಟೆಗೆ ಕರ್ತವ್ಯದಲ್ಲಿದ್ದ ಅಥಣಿ ಪಿಎಸ್‍ಐ ಶಿವಶಂಕರ ಮುಕರಿ (ಕಾ&ಸು)ಪಿಎಸ್‍ಐ ಎಫ್ ಎಸ್ ಇಂಡಿಕರ (ಅಫರಾಧ ವಿಭಾಗ) ಹಾಗೂ ಸಿಬ್ಬಂದಿ ಎಮ್ ಎನ್ ಖೋತ ಇವರು ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ವಾಹನ ಸಂಖ್ಯೆ ಕೆಎ-50 ಎ-3697 (ಟಾಟಾ ಸುಮೋ) ದಲ್ಲಿ ಯಾವುದೇ ದಾಖಲಾತಿಗಳಿಲ್ಲದ 3,00,000/- (ಮೂರು ಲಕ್ಷ ರೂಪಾಯಿಗಳು) ಪತ್ತೆಯಾಗಿದ್ದು ಹಣವನ್ನು ವಶಪಡಿಸಿಕೊಂಡು ಪಂಚನಾಮೆ ಮಾಡಿ ಉಪ ಖಜಾನೆ ಅಥಣಿಯಲ್ಲಿ ಇರಿಸಲಾಗಿರುತ್ತದೆ. ಈ ಕಾರ್ಯವನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ|| ಸಂಜೀವ ಪಾಟೀಲರವರು ಪ್ರಶಂಸಿಸಿದ್ದಾರೆ.