ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಫರ್‌ಹಾನ್ ಖಾನ್ ಮತ್ತು ಶಿಬಾನಿ ದಾಂಡೇಕರ್

ಫರ್‌ಹಾನ್ ಖಾನ್ ಮತ್ತು ಶಿಬಾನಿ ದಾಂಡೇಕರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಫೆಬ್ರವರಿ ೨೧ ರಂದು ಮುಂಬೈನಲ್ಲಿ ಈ ಜೋಡಿ ತಮ್ಮ ನೋಂದಾಯಿತ ವಿವಾಹವನ್ನು ನಡೆಸಲಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಈ ಜೋಡಿ ಅದ್ಧೂರಿ ವಿವಾಹವನ್ನು ನಡೆಸಲು ಯೋಜಿಸುತ್ತಿದ್ದಾರೆ ಎಂದು ಈ ಹಿಂದೆ ವರದಿಗಳು ಬಂದಿದ್ದವು. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ, ದಂಪತಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಹೇಮಾ ಮಾಲಿನಿ ಪೊಂಗಲ್ ಆಚರಿಸಿದರು

ದೇಶದಲ್ಲಿ ನಿನ್ನೆ ಮಕರ ಸಂಕ್ರಾಂತಿಯನ್ನು ಆಚರಿಸಲಾಯಿತು.ಒಂದೆಡೆ ಬಿಹು ಮತ್ತು ಇನ್ನೊಂದೆಡೆ ಪೊಂಗಲ್ ನ್ನು ಆಚರಿಸುತ್ತಾರೆ. ಹೀಗಿರುವಾಗ ಬಾಲಿವುಡ್ ನ ಕನಸಿನ ಕನ್ಯೆ ಹೇಮಾ ಮಾಲಿನಿ ಕೂಡ ಈ ಹಬ್ಬವನ್ನು ಆಚರಿಸಿದ್ದಾರೆ. ಅಡುಗೆ ಮನೆಯ ಫೋಟೋವನ್ನು ಹೇಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ನಟಿ ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಇದರೊಂದಿಗೆ, ’ಇಂದು ನಾನು ನನ್ನ ಮನೆಯಲ್ಲಿ ಕುಟುಂಬದೊಂದಿಗೆ ಪೊಂಗಲ್ ಆಚರಿಸಿದ್ದೇನೆ’ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ವಿಕ್ಕಿ ಕೌಶಲ್-ಕತ್ರಿನಾ ಕೈಫ್ ತಮ್ಮ ಹೊಸ ಮನೆಯಲ್ಲಿ ಮೊದಲ ’ಲೋಹ್ರಿ’ ಆಚರಿಸಿದರು

ನೂತನ ದಂಪತಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ನಂತರ ಮಕರ ಸಂಕ್ರಾಂತಿ ದಿನ ತಮ್ಮ ಮೊದಲ ’ಲೋಹ್ರಿ’ಯನ್ನು ಆಚರಿಸಿದರು. ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಫೋಟೋಗಳನ್ನು ನೋಡಿದರೆ ಇಬ್ಬರೂ ಹೊಸಮನೆಯಲ್ಲಿ ಹಬ್ಬವನ್ನು ಸವಿದಿದ್ದಾರೆ ಎನಿಸುತ್ತದೆ. ಕ್ಯಾಟ್ ಮತ್ತು ವಿಕ್ಕಿ ಡಿಸೆಂಬರ್ ೯ ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ವಿವಾಹವಾಗಿದ್ದರು. ಇಬ್ಬರ ವಿವಾಹ ನಡೆದು ಒಂದು ತಿಂಗಳಾಗಿದೆ.

’ದಿ ಗೋಸ್ಟ್’ ಚಿತ್ರದಲ್ಲಿ ಜಾಕ್ವೆಲಿನ್ ಇರುವುದಿಲ್ಲ

ಜಾಕ್ವೆಲಿನ್ ಫರ್ನಾಂಡಿಸ್ ಜೊತೆಯಲ್ಲಿ ಒಂದೊಂದೆ ಅವಕಾಶಗಳು ಕೈತಪ್ಪುತ್ತಿವೆ. ವರದಿಗಳ ಪ್ರಕಾರ, ನಾಗಾರ್ಜುನ ಅಕ್ಕಿನೇನಿ ಅವರ ದಿ ಘೋಸ್ಟ್ ಫಿಲ್ಮ್ ನಿಂದ ಜಾಕ್ವೆಲಿನ್ ಅವರನ್ನು ಕೈಬಿಡಲಾಗಿದೆ.
ಇದರ ಹಿಂದೆ ಸುಕೇಶ್ ಅವರೊಂದಿಗಿನ ಸಂಬಂಧ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣವಲ್ಲ, ನಟಿಯ ಹಣದ ಅತಿಬೇಡಿಕೆ. ಜಾಕ್ವೆಲಿನ್ ನಿರ್ಮಾಪಕರಲ್ಲಿ ತುಂಬಾ ಹಣವನ್ನು ಕೇಳಿದ್ದರು. ನಿರ್ಮಾಪಕರು ಅದಕ್ಕೆ ನಿರಾಕರಿಸಿದರು.ಹೀಗಾಗಿ ಹೊಸ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ.