ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್ಯ ಮಹಿಳಾ ನಿಲಯದ ನಿವಾಸಿ

ಕಲಬುರಗಿ,ಏ.06:ಕಲಬುರಗಿ ರಾಜ್ಯ ಮಹಿಳಾ ನಿಲಯದ ಮಹಿಳಾ ನಿವಾಸಿಯಾದ ಶಾರದಾ ಇವರ ವಿವಾಹವು ಕಲಬುರಗಿ ಸುಂದರ ನಗರದ ಸದಾನಂದ ಇವರ ಪುತ್ರರಾದ ಮಚ್ಚೇಂದ್ರ ಇವರೊಂದಿಗೆ ಮಂಗಳವಾರ ನಡೆಯಿತು. ಈ ಮೂಲಕ ನಿವಾಸಿಯು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದಾರೆ ಎಂದು ಕಲಬುರಗಿ ರಾಜ್ಯ ಮಹಿಳಾ ನಿಲಯದ ಪ್ರಭಾರಿ ಅಧೀಕ್ಷಕಿ ಜ್ಯೋತಿ ಎಂ. ಬಮ್ಮನಳ್ಳಿ ಅವರು ತಿಳಿಸಿದ್ದಾರೆ.

ಈ ಮಹಿಳಾ ನಿಲಯದ ನಿವಾಸಿಯ ವಿವಾಹವನ್ನು ಸರಳ ಹಾಗೂ ಸಾಂಪ್ರದಾಯಿಕ ಪ್ರಕಾರ ನೆರವೇರಿಸಿ ವಿವಾಹ ನೋಂದಣಿ ಕಚೇರಿಯಲ್ಲಿ ನೊಂದಾಯಿಸಲಾಗಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಶಿವಶರಣಪ್ಪ, ಪ್ರಭಾರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪ ಬೆಳಗುಂಪಿ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಜ್ಯೋತಿ ಎಂ. ಬಮ್ಮನಳ್ಳಿ, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿ ಹಾಗೂ ಮಹಿಳಾ ನಿಲಯದ ನಿವಾಸಿಗಳು ಭಾಗಿಯಾಗಿದ್ದರು.