ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್ಯ ಮಹಿಳಾ ನಿಲಯದ ನಿವಾಸಿ

ಕಲಬುರಗಿ,ಮಾ.23:ಕಲಬುರಗಿ ರಾಜ್ಯ ಮಹಿಳಾ ನಿಲಯದ ಮಹಿಳಾ ನಿವಾಸಿಯಾದ ಪ್ರಿಯಾಂಕ ಇವರ ವಿವಾಹವು ಕಲಬುರಗಿ ನಗರದ ಬಿದ್ದಾಪೂರ ಕಾಲೋನಿಯ ಕೇಶವರಾವ್ ಕುಲಕರ್ಣಿ ಇವರ ಪುತ್ರರಾದ ಶಶಿಧರ ಇವರೊಂದಿಗೆ ಮಂಗಳವಾರ ನಡೆಯಿತು. ಈ ಮೂಲಕ ನಿವಾಸಿಯು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದಾರೆ ಎಂದು ಕಲಬುರಗಿ ರಾಜ್ಯ ಮಹಿಳಾ ನಿಲಯದ ಪ್ರಭಾರಿ ಅಧೀಕ್ಷಕಿ ಜ್ಯೋತಿ ಎಂ. ಬಮ್ಮನಳ್ಳಿ ಅವರು ತಿಳಿಸಿದ್ದಾರೆ.

ಈ ಮಹಿಳಾ ನಿಲಯದ ನಿವಾಸಿಯ ವಿವಾಹವನ್ನು ಸರಳ ಹಾಗೂ ಸಾಂಪ್ರದಾಯಿಕ ಪ್ರಕಾರ ನೆರವೇರಿಸಿ ವಿವಾಹ ನೋಂದಣಿ ಕಚೇರಿಯಲ್ಲಿ ನೊಂದಾಯಿಸಲಾಗಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಶಿವಶರಣಪ್ಪ, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಜ್ಯೋತಿ ಎಂ. ಬಮ್ಮನಳ್ಳಿ, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿಗಳು ಹಾಗೂ ಮಹಿಳಾ ನಿಲಯದ ನಿವಾಸಿಗಳು ಭಾಗಿಯಾಗಿದ್ದರು.