ದಸ್ತಾಪೂರ ಗ್ರಾಮಕ್ಕೆ ನೂತನ ಬಸ್ ಸಂಚಾರಕ್ಕೆ ಚಾಲನೆ

ಕಮಲಾಪೂರ:ನ.25: ಮೂಲ ಸೌಕರ್ಯಗಳು ಬಲವರ್ಧನೆಗೊಂಡರೆ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಸಮಾಜ ಸೇವಕಿ ಜಯಶ್ರೀ ಬಿ. ಮತ್ತಿಮಡು ಹೇಳಿದರು.
ಕಲಬುರಗಿ ಗ್ರಾಮೀಣ ಕ್ಷೇತ್ರದ ದಸ್ತಾಪೂರ ಗ್ರಾಮದಿಂದ ಗಂಜ ವರೆಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಶುಕ್ರವಾರ ದಸ್ತಾಪೂರ ಗ್ರಾಮದಿಂದ ಕಲಬುರಗಿ ನಗರಕ್ಕೆ ಹೋಗಿ ಬರಲು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಹಲವು ದಿನಗಳಿಂದ ಸಮಸ್ಯೆ ಎದುರಿಸುತ್ತಿದರು.
ಹೀಗಾಗಿ ಗ್ರಾಮಕ್ಕೆ ಸೂಕ್ತ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂಬುದು ಗ್ರಾಮಸ್ಥರ 15-20 ವರ್ಷಗಳ ಕಾಲದ ಹಲವು ದಿನಗಳ ಬೇಡಿಕೆಯಾಗಿತ್ತು. ಹೀಗಾಗಿ ಜನರ ಬೇಡಿಕೆಗೆ ಶಾಸಕರಾದ ಬಸವರಾಜ ಮತ್ತಿಮಡು ಅವರು ಜನರ ಮನವಿಗೆ ಸ್ಪಂದಿಸಿ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ದಸ್ತಾಪೂರ ಗ್ರಾಮಕ್ಕೆ ನೂತನ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರಿಗೆ ಸಮಸ್ಯೆ ಬಗೆಹರಿಸಲಾಗಿದೆ ಎಂದು ತಿಳಿಸಿದರು.
ದಸ್ತಾಪೂರ ಗ್ರಾಮಕ್ಕೆ ಬಸ್ ಸಂಚಾರ ಕಲ್ಪಿಸಿದಕ್ಕೆ ಸಂತಸವಾಗಿದೆ. ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ಹೋಗಬೇಕಾದರೆ ಬಹಳ ತೊಂದರೆಯಾಗುತ್ತಿತ್ತು. ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಬಸ್ ಗಾಗಿ ಕಾದು ಬಸ್ ಹತ್ತಿದರು ಸಹ ಬಸ್ ನಲ್ಲಿ ಕುಳಿತುಕೊಂಡು ಸಂಚಾರ ಮಾಡಲು ಆಸನಗಳು ಸಿಗುತ್ತಿರಲಿಲ್ಲ. ಆದರೆ ಇದೀಗ ಬಸ್ ವ್ಯವಸ್ಥೆ ಮಾಡಿರುವುದರಿಂದ ಆ ಸಮಸ್ಯೆ ಇರುವುದಿಲ್ಲ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್, ವೈಜನಾಥ ದಸ್ತಾಪೂರ, ಹಾಗೂ ಗ್ರಾಮ ಪಂಚಾಯತ್ ಅದ್ಯಕ್ಷ ಭೀಮಬಾಯಿ ಹಣಮಂತರಾಯ ಗುಡ್ಡಾ, ಉಪಾಧ್ಯಕ್ಷ ಶಾಂತವೀರ ಡಬರಾಬಾದ, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಪಂಡಿತ್, ಶರಣಬಸಪ್ಪ ಪಂಡರಗಿ,ಗ್ರಾಮದ ಹಿರಿಯ ಮುಖಂಡರಾರದ ಶಾಂತವೀರ ಪಾಟೀಲ, ಶರಣಬಸಪ್ಪ ಕಾಮಾ,ಸಿದ್ದಾರೂಡ ಗರಿ,ಚನ್ನಬಸ್ಸಪ್ಪ ಮುನ್ನಳ್ಳಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.