ದಸೂಡಿ ಡೇರಿ ಕಟ್ಟಡಕ್ಕೆ ಸಹಾಯ ಧನ

ಹುಳಿಯಾರು, ಆ. ೨೯- ಹೋಬಳಿಯ ದಸೂಡಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡದ ಜೀರ್ಣೋದ್ದಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರುಗೊಂಡ ೧ ಲಕ್ಷ ೫೦ ಸಾವಿರ ರೂ.ಗಳ ಡಿಡಿಯನ್ನು ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಅವರು ಡಿಡಿಯನ್ನು ಡೇರಿ ಅಧ್ಯಕ್ಷೆ ಲಲಿತಮ್ಮ ನವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ರಾಮಚಂದ್ರ, ಸಮಿತಿಯ ಕಾರ್ಯದರ್ಶಿ ಶಾರದಮ್ಮ, ಗ್ರಾ.ಪಂ. ಸದಸ್ಯರಾದ ಮರಿಯಪ್ಪ, ಲಕ್ಷ್ಮಿಕಾಂತ್, ಮೇಲ್ವಿಚಾರಕ ನರಸಿಂಹರಾಜು, ಸೇವಾ ಪ್ರತಿನಿಧಿ ಕರಿಯಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.