ದಸರಾ ಹಬ್ಬ: ದೇವಸ್ಥಾನಗಳಿಗೆ ಶಾಸಕರ ಭೇಟಿ

ಸಿರವಾರ.ಅ.೨೪- ತಾಲೂಕಿನ ಹೀರಾ, ಹುಡಾ, ಮತ್ತು ನವಲಕಲ್ ಗ್ರಾಮಗಳ ಶ್ರೀಶಾಂಭವಿ ದೇವಸ್ಥಾನಗಳಿಗೆ ಶಾಸಕ ಜಿ.ಹಂಪಯ್ಯ ನಾಯಕ ಭೇಟಿ ನೀಡಿದರು.
ದಸರಾ ಹಬ್ಬದಲ್ಲಿ ತಾಲೂಕಿನಾದ್ಯಂತ ಇರುವ ಶ್ರೀ ದೇವಿ ದೇವಸ್ಥಾನ ಹಾಗು ಮಠಗಳಲ್ಲಿ ಒಂಭತ್ತು ದಿನಗಳ ಕಾಲ ನಿರಂತರವಾಗಿ ಪುರಾಣ ಪ್ರವಚನ, ಹಾಗು ದೇವಿಗೆ ವಿವಿಧ ಸೇವೆಗಳನ್ನು ಸಲ್ಲಿಸಲಾಗುತ್ತದೆ. ಹಲವು ರೂಪಗಳಲ್ಲಿ ಶಾಂಭವಿ ಮಾತೆಯನ್ನು ಆರಾಧಿಸಲಾಗುತ್ತದೆ. ಹೀರಾ, ಹುಡಾ, ನವಲಕಲ್ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಇದ್ದರು.