ದಸರಾ ಹಬ್ಬ: ಘಟಸ್ಥಾಪನೆ ಪೂಜೆ


ಲಕ್ಷ್ಮೇಶ್ವರ,ಅ.16: ಎಸ್‍ಎಸ್‍ಕೆ ಸಮಾಜದ ಅಂಬಾಭವಾನಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಭಾನುವಾರ ಘಟಸ್ಥಾಪನಾ ಪೂಜೆ ನೆರವೇರಿತು.
ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಮತ್ತು ಲೋಕಾಯುಕ್ತ ಡಿವೈಎಸ್‍ಪಿ ಶಂಕರ ರಾಗಿ ಅವರು ಘಟಸ್ಥಾಪನಾ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.
ನಂತರ ನಡೆದ ಸಭಾ ಕಾರ್ಯಕ್ರಮ ಉದ್ಧೇಶಿಸಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ ‘ದಸರಾ ಭಾರತೀಯರಿಗೆ ಅತ್ಯಂತ ದೊಡ್ಡ ಮತ್ತು ಪವಿತ್ರ ಹಬ್ಬ. ಇದು ದೇವಿಯ ಆರಾಧನೆಯ ಹಬ್ಬ. ಒಂಬತ್ತು ದಿನಗಳವರೆಗೆ ದೇವಿಯ ದೇವಸ್ಥಾನಗಳಲ್ಲಿ ದೇವಿಯ ಪುರಾಣ ಪ್ರವಚನ ನಡೆಯುತ್ತವೆ. ಈ ನಿಟ್ಟಿನಲ್ಲಿ ಲಕ್ಷ್ಮೇಶ್ವರದ ಎಸ್‍ಎಸ್‍ಕೆ ಸಮಾಜದವರು ವಿಶಿಷ್ಠ ರೀತಿಯಲ್ಲಿ ಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ’ ಎಂದರು.
ಲೋಕಾಯುಕ್ತ ಡಿವೈಎಸ್‍ಪಿ ಶಂಕರ ರಾಗಿ ಮಾತನಾಡಿ ‘ನಾಡಿನ ಸಂಸ್ಕøತಿ, ಪರಂಪರೆ ಉಳಿಸುವಲ್ಲಿ ದಸರಾ ಹಬ್ಬದ ಕೊಡುಗೆ ದೊಡ್ಡದು. ವಿಶೇಷವಾಗಿ ದಸರಾ ಹಬ್ಬ ಕನ್ನಡಿಗರಿಗೆ ನಾಡಹಬ್ಬವಾಗಿ ನೂರಾರು ವರ್ಷಗಳಿಂದ ಆಚರಿಸಲ್ಪಡುತ್ತಿದೆ. ಇಂಥ ಶ್ರೀಮಂತ ಪರಂಪರೆಯ ಹಬ್ಬವನ್ನು ಜಾತಿ, ಮತ, ಪಂಥ ಎನ್ನದೇ ಎಲ್ಲರೂ ಸೇರಿ ಆಚರಿಸೋಣ’ ಎಂದರು.
ಈ ಸಂದರ್ಭದಲ್ಲಿ ಎಸ್‍ಎಸ್‍ಕೆ ಸಮಾಜದ ಅಧ್ಯಕ್ಷ ಪಿ.ಕೆ. ಬದಿ, ಉಪಾಧ್ಯಕ್ಷ ನಾರಾಯಣಸಾ ಪವಾರ, ಕಾರ್ಯದರ್ಶಿ ಲಕ್ಷ್ಮಣಸಾ ರಾಜೋಳಿ, ತುಕಾರಾಮಸಾ ಬದಿ, ವಿಠ್ಠಲಸಾ ಶಿದ್ಲಿಂಗ್, ನಿವೃತ್ತ ಮುಖ್ಯ ಶಿಕ್ಷಕ ರಮೇಶ ನವಲೆ, ಕಿರಣ ನವಲೆ, ಎಸ್‍ಎಸ್‍ಕೆ ಸಮಾಜ ಸೇವಾ ಸಮಿತಿಯ ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಾಬಾಯಿ ಪವಾರ, ಇಂದುಬಾಯಿ ಬದಿ, ಸರೋಜಾಬಾಯಿ ಬದಿ, ಶೋಭಾ ಬಸವಾ, ಲಕ್ಷ್ಮೀಬಾಯಿ ಬದಿ, ಎಸ್‍ಎಸ್‍ಕೆ ತರುಣ ಸಂಘದ ಅಧ್ಯಕ್ಷ ಭರತ ಬಾಕಳೆ, ಮಂಜುನಾಥ ಬದಿ, ಕಿರಣ ಬದಿ, ವಿನಾಯಕ ರಾಜೋಳಿ, ಗಣೇಶ ಬದಿ ಸೇರಿದಂತೆ ಮತ್ತಿತರರು ಇದ್ದರು. À ಒಂಭತ್ತು ದಿನಗಳವರೆಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.