ದಸರಾ ಹಬ್ಬಕ್ಕೆ ಊರಿಗೆ ಹೋದಾಗ ಮನೆಗೆ ಕನ್ನ 3.67 ಲಕ್ಷ ಮೊತ್ತದ ಬಂಗಾರ, ಬೆಳ್ಳಿ, ನಗದು ಕಳವು

ಕಲಬುರಗಿ,ಅ.27-ದಸರಾ ಹಬ್ಬಕ್ಕೆಂದು ಮನೆಗೆ ಬೀಗ ಹಾಕಿಕೊಂಡು ಸ್ವಗ್ರಾಮಕ್ಕೆ ಹೋದಾಗ ಕಳ್ಳರು ಮನೆ ಬೀಗ ಮುರಿದು 3,67,200 ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಇಲ್ಲಿನ ಬಾಳಿ ಕಾಲೋನಿಯಲ್ಲಿ ನಡೆದಿದೆ.
ಸುರೇಶ ಕುಲಕರ್ಣಿ ಎಂಬುವವರ ಮನೆಯೇ ಕಳವಾಗಿದ್ದು, ಇವರು ಪತ್ನಿ ಮಗನನೊಂದಿಗೆ ದಸರಾ ಹಬ್ಬಕ್ಕೆಂದು ಮನೆಗೆ ಬೀಗ ಹಾಕಿಕೊಂಡು ಸ್ವಗ್ರಮ ಯರಗಲ್‍ಗೆ ಹೋದಾಗ ಮನೆ ಕಳ್ಳತನವಾಗಿದೆ.
ಮನೆ ಬೀಗ ಮುರಿದು ಕಳ್ಳರು ಅಲಮಾರಿಯಲ್ಲಿದ್ದ 90 ಸಾವಿರ ರೂ.ಮೌಲ್ಯದ 30 ಗ್ರಾಂ.ಬಂಗಾರದ ಪಾಟಲಿ, 90 ಸಾವಿರ ರೂ.ಮೌಲ್ಯದ 30 ಗ್ರಾಂ.ಬಂಗಾರದ ಎರಡೆಳೆ ಚೈನ್, 30 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಬೋರಮಳಾ, 60 ಸಾವಿರ ರೂ.ಮೌಲ್ಯದ 20 ಗ್ರಾಂ.ಬಂಗಾರದ 4 ಸುತ್ತುಂಗುರ, 30 ಸಾವಿರ ರೂ.ಮೌಲ್ಯದ 12 ಗ್ರಾಂ.ಬಂಗಾರದ 3 ಜೊತೆ ಕಿವಿಯೋಲೆ, 1500 ರೂ.ಮೌಲ್ಯದ 250 ಗ್ರಾಂ.ಬೆಳ್ಳಿ ತಂಬಿಗೆ, 1,600 ರೂ.ಮೌಲ್ಯದ 40 ಗ್ರಾಂ.ನ 4 ಬೆಳ್ಳಿ ಗ್ಲಾಸುಗುಳು, 9 ಸಾವಿರ ರೂ.ಮೌಲ್ಯದ 150 ಗ್ರಾಂ.ನ.3 ಬೆಳ್ಳಿ ತಟ್ಟೆಗಳು, 3,600 ಮೌಲ್ಯದ 80 ಗ್ರಾಂ.ನ ಒಂದು ಬೆಳ್ಳಿ ತಟ್ಟೆ, 9 ಸಾವಿರ ರೂ.ಮೌಲ್ಯದ 150 ಗ್ರಾಂ.ನ 3 ಬೆಳ್ಳಿ ತಟ್ಟೆಗಳು, 4 ಸಾವಿರ ರೂ.ಮೌಲ್ಯದ 100 ಗ್ರಾಂ.ನ 2 ಸಮೆ, 4,800 ರೂ.ಮೌಲ್ಯದ 120 ಗ್ರಾಂ.ನ.7 ನೀಲಾಂಜನಗಳು, 1,200 ರೂ.ಮೌಲ್ಯದ 30 ಗ್ರಾಂ.ನ ತೀರ್ಥ ಕೊಡುವ ಸೌಟು, 3 ಸಾವಿರ ರೂ.ಮೌಲ್ಯದ 80 ಗ್ರಾಂ.ನ 2 ಬೆಳ್ಳಿ ಬಟ್ಟಲುಗಳು ಮತ್ತು 25 ಸಾವಿರ ರೂ.ನಗದು ಸೇರಿ 3,67,200 ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ. ಈ ಸಂಬಂಧ ಸುರೇಶ ಕುಲಕರ್ಣಿ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.