ಸಂಜೆವಾಣಿ ವಾರ್ತೆ
ದಾವಣಗೆರೆ. ಅ.೨೧; ದಸರಾ ಸಿ ಎಂ ಕಪ್ ಕ್ರೀಡಾ ಕೂಟ ಮೈಸೂರ ಯುವ ಸಬಲಿಕರಣ ಹಾಗೂ ಕ್ರೀಡಾ ಇಲಾಖೆ ಕರ್ನಾಟಕ ಒಲಂಪಿಕ್ ಅಸೋಷಿಯೇಷನ್ ಮೈಸೂರ ದಸರಾ ಉಪ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಇತೀಚೆಗೆ ಮಹಿಳೆಯರಿಗಾಗಿ ನಡೆದ 30 ಕೀ ಮೀ ರೋಡ್ ಮಾಸ್ ಸ್ಟಾರ್ಟ ಸ್ಪರ್ಧೆಯಲ್ಲಿ ಭಾಗವಹಿಸಿ ಧಾರವಾಡ ಜಿಲ್ಲೆಯ ಆಯಿಷಾ ಮೋಮಿನ್ ಅವರು ತೃತೀಯ ಸ್ಥಾನ ಪಡೆಯುವುದರೊಂದಿಗೆ ಧಾರವಾಡ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ. ಈ ಸ್ಪರ್ಧೆಯಲ್ಲಿ 8 ಜಿಲ್ಲೆಗಳಿಂದ 46 ಸ್ಪರ್ಧಾಳುಗಳು ಭಾಗವಹಿಸಿದ್ದರು.ಟೀಮ್ ಮ್ಯಾನೇಜರ್ ಶಿವಪುತ್ರಪ್ಪ ಕಣವಿ ಜಿಲ್ಲಾ ಕಾರ್ಯದರ್ಶಿ ಸಚಿನ್ ಕುರಿಯರ್ ರಾಜ್ಯ ಕಾರ್ಯದರ್ಶಿ ಎಸ್ ಎನ್ ಕುರಣಿ ರಾಜ್ಯ ಉಪಾಧ್ಯಕ್ಷರಾದ ಎಮ್ ಹೆಚ್ ಕುರಿಯರ್ ಜಿಲ್ಲಾ ಉಪಾಧ್ಯಕ್ಷ ಹಾಗೂ ರಾಜ್ಯ ಸಹ ಕಾರ್ಯದರ್ಶಿ ದಿನೇಶ ಜೈನ್ ಅವರು ವಿಜೇತರಾದ ಆಯಿಷಾ ಮೋಮಿನ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.