ದಸರಾ ವೇಳಗೆ ಭದ್ರಾಮೇಲ್ದಂಡೆ ಯೋಜನೆಗೆ ಪೈಪ್ ಲೈನ್ ಕಾಮಗಾರಿ

ಜಗಳೂರು.ಜು.೧೭; ತಾಲೂಕಿನ ಅಣಬೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶೀಘ್ರದಲ್ಲಿ ಭದ್ರಾಮೇಲ್ದಂಡೆ ಯೋಜನೆ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲಾಗುವುದು ಅಣಬೂರು ವ್ಯಾಪ್ತಿಗೆ ಭದ್ರೆ ಹರಿಸುವೆ ದಶಕಗಳ ಕನಸಿನ ಎರಡು ನೀರಾವರಿ ಯೋಜನೆಗಳು ಸಕಾರಗೊಂಡಿದ್ದು ಎತ್ತರದ ಪ್ರದೇಶ ವಾಗಿದ್ದರಿಂದ ಅಣಬೂರು ಗ್ರಾಮ ಭದ್ರಾಮೇಲ್ದಂಡೆ ಯೋಜನೆಯಡಿ ಕೈಬಿಟ್ಟಿತ್ತು.ಇದೀಗ ಸೇರ್ಪಡೆಗೊಳಿಸಿರುವೆ ದಸರಾ ವೇಳಗೆ ಭದ್ರಾಮೇಲ್ದಂಡೆ ಯೋಜನೆಗೆ ಪೈಪ್ ಲೈನ್ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಾಗುವುದು.ಕನಸಿನ ಭದ್ರಾಮೇಲ್ದಂಡೆ ಯೋಜನೆ ತಾಲೂಕಿಗೆ ಹರಿಸುವೆ ಸರಕಾರದ ವಿನೂತನ ಕಾರ್ಯಕ್ರಮದ ಮೂಲಕ ಮನೆಬಾಗಿಲಿಗೆ ಅಧಿಕಾರಿಗಳು ಅಗಮಿಸಿ ಸರ್ಕಾರದ ಯೋಜನೆ ಗಳಾದ ಸಂಧ್ಯಾ ಸುರಕ್ಷಾ. ವಿಧವಾ ವೇತನ. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ ಸೇರಿದಂತೆ  ಹಲವಾರು ಅಹವಾಲು ಸ್ವೀಕರಿಸಿ ಸಮಸ್ಯೆ ಇತ್ಯರ್ಥಗೊಳಿಸುತ್ತಿದೆ‌ ಗಡಿ ಗ್ರಾಮಗಳಿಗೆ ಒತ್ತುನೀಡಿ ಗ್ರಾಮವಾಸ್ತವ್ಯ ಹಮ್ಮಿಕೊಳ್ಳಲು ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಅವರಿಗೆ ಸೂಚಿಸಿರುವೆ.ತಾಲೂಕಿಗೆ ಅಲೆಮಾರಿ ಸಮುದಾಯಕ್ಕೆವಸತಿ ಯೋಜನೆಯಡಿ 1743 ಮನೆಗಳನ್ನು ಹಾಗೂ ಅಣಬೂರು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಜೂರು ಮಾಡಿಸಲಾಗಿದೆ ಅಣಬೂರು ಗ್ರಾ.ಪಂ ವ್ಯಾಪ್ತಿ ಗ್ರಾಮಗಳಿಗೆ ರೂ.11 ಕೋಟಿ 54 ಲಕ್ಷ ಅನುದಾನದಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಾಗಿದೆ ಎಂದರು.ಈ ಕ್ಷೇತ್ರದ ಜನರು ಮೂರು ಬಾರಿ ಶಾಸಕನನ್ನಾಗಿ ಆಯ್ಕೆಮಾಡಿದ್ದಾರೆ ಜಗಳೂರು ವಿಧಾನಸಭಾ ಕ್ಷೇತ್ರದ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ ಮುಂದಿನ ದಿನಗಳಲ್ಲಿಯೂ ಸೇವಕನಾಗಿರುವೆ ರಾಜ್ಯದ ಬಿಜೆಪಿ ಆಡಳಿತ ಸರಕಾರ ಈಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯದವರಿಗೆ 75 ಯೂನಿಟ್ ವಿದ್ಯುತ್ ನ್ನು ಉಚಿತವಾಗಿ ನೀಡಲು ಆದೇಶಿಸಿದೆ ಅಗತ್ಯ ದಾಖಲೆಯೊಂದಿಗೆ ಬೆಸ್ಕಾಂ ಅಧಿಕಾರಿಗಳನ್ನು ಭೇಟಿ ಮಾಡಿ ಇದರ ಸದುಪಯೋಗ ಪಡೆಯಿರಿ ಎಂದು ಹೇಳಿದರು.ತಾ.ಪಂ ಇ.ಓ ಲಕ್ಷ್ಮೀಪತಿ ಮಾತನಾಡಿ,ತಾಲೂಕಿಗೆ ವಿವಿಧ ವಸತಿ ಯೋಜನೆಯಡಿ 3 ಸಾವಿರ ಮನೆಗಳನ್ನುಮಂಜೂರು ಮಾಡಿಸಿ ಶಾಸಕರು  ಅಲೆಮಾರಿ ಕುಟುಂಬಗಳಿಗೆ ಸೂರು ಕಲ್ಪಿಸಿದ್ದಾರೆ. ಮನರೇಗಾದಡಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಗ್ರಾಮೀಣ ಭಾಗಗಳಲ್ಲಿ ಶೇ.15 ಹೆಚ್ಚುವರಿ ಸೇರಿದಂತೆ ಶೇ.25 ರಷ್ಟು ಅನುದಾನ ಹಾಗೂ ಸಿಸಿ ರಸ್ತೆಗಳ ಕಾಮಗಾರಿ ಅಭಿವೃದ್ದಿಗೆ ಮಂಜೂರು ಮಾಡಿಸಿದ್ದಾರೆ ಎಂದು ಮಾಹಿತಿ ನೀಡಿದರು‌.ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಲೊಕೋಪಯೋಗಿ ಎ.ಇ.ಇ ನಿರಂಜನಮೂರ್ತಿ, ಕೃಷಿ ಇಲಾಖೆ ಅಧಿಕಾರಿ ಮಿಥುನ್ ತೋಟಗಾರಿಕಾ ಅಧಿಕಾರಿ ವೆಂಕಟೇಶ್ ಮೂರ್ತಿ,ಪಶು ಇಲಾಖೆ ಲಿಂಗರಾಜ್.ಲೋಕೋಪಯೋಗಿ ಇಲಾಖೆ ಎ.ಇ ಶಿವಕುಮಾರ್ ತಾಲೂಕು ಆರೋಗ್ಯಾಧಿಕಾರಿ ನಾಗರಾಜ್,ಗ್ರಾ.ಪಂ ಅಧ್ಯಕ್ಷೆ ಕವಿತಾ ರೇಣುಕೇಶ್ ಗ್ರಾಮ ಪಂಚಾಯಿತಿ ಸೋಮಣ್ಣ,ವಿರೇಶ್ ಸೇರಿದಂತೆ ಎಲ್ಲ ಗ್ರಾಮ ಪಂಚಾಯಿತಿ  ಸದಸ್ಯರು ಬಿಜೆಪಿ ಪಕ್ಷದ ಮುಖಂಡರಾದ ಮುಖಂಡರಾದ ಕಾನನಕಟ್ಟೆ ಪ್ರಭು, ಬಗರ್ ಹುಕುಂ ಸಮಿತಿ ಸದಸ್ಯರಾದ ತಿಪ್ಪೇಸ್ವಾಮಿ,ಸೂರಲಿಂಗಪ್ಪ, ಶಿವಲಿಂಗಪ್ಪ,ಪಿ.ಡಿ.ಓ ಓಬಣ್ಣ,ಕಂದಾಯ ನಿರೀಕ್ಷಕರಾದ ಧನಂಜಯ್. ಕುಬೇರ ನಾಯ್ಕ್. ಶ್ರೀನಿವಾಸ್.ಸೇರಿದಂತೆ ಗ್ರಾಮಲೆಕ್ಕಾಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದ್ದರು.