ದಸರಾ ಮೌನಾನುಷ್ಠಾನದಿಂದ ಲೋಕಕಲ್ಯಾಣ: ಬಸವರಾಜೇಂದ್ರಶ್ರೀ

ಆಳಂದ : ನಾಡಹಬ್ಬ ದಸರಾ ದೇವಿಯ ಆರಾಧನೆಯು
ಭಕ್ತರು ಮಾಡುತ್ತಿದ್ದು ಮಳೆ, ಬೆಳೆ ಸಮೃದ್ಧಿ ಜತೆಗೆ
ಭಕ್ತರ ಇಷ್ಠಾರ್ಥ ಸಿದ್ದಿ ಲೋಕ ಕಲ್ಯಾಣಕ್ಕಾಗಿ
ಮೌನಾನುಷ್ಠಾನ ಮಾಡಿರುವುದಗಿ ಜಿಡಗಾ-ಅಚಲೇರ-
ಪಡಸಾವಳಿ ಮಠದ ಪೀಠಾಧಿಪತಿ ಬಸವರಾಜೇಂದ್ರ ಸ್ವಾಮೀಜಿ
ನುಡಿದರು.
ಮಹಾರಾಷ್ಟ್ರದ ಅಚಲೇರ ಮಠದಲ್ಲಿ ದಸರಾ ಹಬ್ಬದ 32
ನೇ ಮೌನಾನುಷ್ಠಾನ ಮಂಗಲ್ ಧಾರ್ಮಿಕ ಸಭೆಯಲ್ಲಿ
ಭಕ್ತರಿಗೆ ಆಶೀರ್ವಧಿಸಿ ಮಾತನಾಡಿದ ಅವರು, ಹೀಂದೆ ಜಿಡಗಾದ
ಲಿಂಗೈಕ್ಯ ಗುರು ಸಿದ್ಧರಾಮರು ಮಠದಲ್ಲಿ ದೇವಿಯ
ಮೂರ್ತಿ ಪ್ರತಿಷ್ಠಾಪಿಸಿ ಆರಾಧನೆ ಮಾಡುತ್ತಿದ್ದರು ಈ ನಿಮಿತ್ತ
ಮಠದಲ್ಲಿ ಮೌನಾನುಷ್ಠಾನ ಕೈಗೊಳ್ಳಲಾಗಿದೆ ಭಕ್ತರಿಗೆ
ಕಷ್ಟಗಳು ಬರದೆ ಅವರ ಇಷ್ಠಾರ್ಥಗಳು ಈಡೇರಿಸಲಿ
ಎಂದು ಹರಿಸಿದರು.
ಅಚಲೇರ ಗ್ರಾಪಂ ಮಾಜಿ ಅಧ್ಯಕ್ಷ ಸುಭಾಷ ಸೋಲಂಕರ,
ವೀರಶೈವ ಲಿಂಗಾಯತ ಪಂಚಮಸಾಲಿ ಯುವ ಘಟಕ ರಾಜ್ಯ
ಉಪಾಧ್ಯಕ್ಷ ಶ್ರೀಶೈಲ್ ಚಿಚಕೋಟಿ ಬಂಗರಗಾ, ಆಳಂದ
ಬಿಜೆಪಿ ಮಾಜಿ ನಗರಾಧ್ಯಕ್ಷ ಬಸವರಾಜ ನಿಪ್ಪಾಣಿ,
ಪ್ರಮುಖರಾದ ಗೌಡಪ್ಪ ಖೇತಗೌಡರ, ಅಚಪ್ಪ ಬೆಳಗಲಿ,
ನಾಗಪ್ಪ ಹುಕ್ಕೇರಿ, ಬನ್ನಪ್ಪ ಬೆಳಗಲಿ, ಅಶೋಕ

ಕೊಪ್ಪದ, ಕೃಷ್ಣರಾವ ನಾಯಕ, ರವಿ ಖೇತಗೌಡರ,
ಅಶೋಕ ಪಾಟೀಲ್, ಪರಪ್ಪ ಖೇತಗೌಡರ್, ಪರಪ್ಪ
ಖೇತಗೌಡರ, ಸಂಗನಬಸವ ಹಿರೇಮಠ ಸೇರಿದಂತೆ
ಕರ್ನಾಟಕ, ಮಹಾರಾಷ್ಟ್ರದ ಭಕ್ತರು ಭಾಗವಹಿಸಿ ಶ್ರೀಗಳ
ದರ್ಶನ ಪಡೆದರು.