ದಸರಾ ಧರ್ಮ ಸಮ್ಮೇಳನ ವೇದಿಕೆ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ

ಲಿಂಗಸುಗೂರು,ಸೆ.೨೭- ಲಿಂಗಸುಗೂರನಲ್ಲಿ ಮುಂದಿನ ತಿಂಗಳು ನಡೆಯಲಿರುವ ದಸರಾ ಧರ್ಮ ಸಮ್ಮೇಳನ ವೇದಿಕೆ ನಿರ್ಮಾಣಕ್ಕೆ ಶಾಸಕರಾದ ಶರಣಗೌಡ ಪಾಟೀಲ ಬಯ್ಯಾಪುರ ಶಾಸಕ ಮಾನಪ್ಪ ಡಿ ವಜ್ಜಲ್ ಭೂಮಿ ಪೂಜೆ ಕಾರ್ಯ ನೆರವೇರಿಸಿದರು
ಅಕ್ಟೋಬರ್ ತಿಂಗಳಲ್ಲಿ ನಡೆಯುವ ಮಾನವ ಕುಲಕ್ಕೆ ಒಳಿತಿಗಾಗಿ ವಿಶೇಷವಾಗಿ ಮಹಾನವಮಿ ಹಬ್ಬದ ಪ್ರಯುಕ್ತ ದಸರಾ ಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಜಿಲ್ಲೆಯಲ್ಲಿ ಪ್ರತಿವರ್ಷ ರಂಭಾಪುರಿ ಶ್ರೀಗಳಿಂದ ದಸರಾ ಧರ್ಮ ನಡೆಯುತ್ತಾ ಬರುತ್ತಿದೆ ಅದರಂತೆ ಈ ವರ್ಷ ಲಿಂಗಸುಗೂರು ನಗರದಲ್ಲಿ ದಸರಾ ಧರ್ಮ ಸಮ್ಮೇಳನ ನಡೆಯಲಿದೆ ಈ ಧರ್ಮ ಧಾರ್ಮಿಕ ಸಮ್ಮೇಳನಕ್ಕೆ ಪಂಚಪೀಠಗಳ ಜಗದ್ಗುರು ಅದರಲ್ಲೂ ಮುಖ್ಯವಾಗಿ ರಂಭಾಪುರಿ ಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಪ್ರತಿ ದಿನ ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಸಂಜೆ ಜರುಗಲಿರುವ ಧರ್ಮ ಸಮ್ಮೇಳನಕ್ಕೆ ನಾಡಿನ ಹರಗುರು ಚರಮೂರ್ತಿ ಮಠಾಧೀಶರು ರಾಜ್ಯದ ಮುಖ್ಯಮಂತ್ರಿ ಆದಿಯಾಗಿ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದಸರಾ ಧರ್ಮ ಸಮ್ಮೇಳನಕ್ಕೆ ಭಾಗವಹಿಸಲಿದ್ದಾರೆ ಎಂದು ಅಮರೇಶ್ವರ ಗುರು ಗಜದಂಡ ಶಿವಾಚಾರ್ಯ ಸ್ವಾಮೀಜಿಗಳು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು .
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಶಾಸಕ ಮಾನಪ್ಪ ಡಿ ವಜ್ಜಲ್ ಅಖಿಲ ಭಾರತ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಪ್ಪ ಮೇಟಿ ಮುಖಂಡರಾದ ಡಾ ಎನ್ ಎಲ್ ನಡುವಿನಮನಿ ಡಾ ಶರಣಗೌಡ ಪಾಟೀಲ ಮಲ್ಲಣ್ಣ ವಾರದ ಭೂಪನಗೌಡ ಪಾಟೀಲ ಕರಡಕಲ್ ಪಾಮಯ್ಯ ಮುರಾರಿ ಗೀರಿಮಲ್ಲನ ಗೌಡ ಪಾಟೀಲ್ ಕರಡಕಲ್ ಸೋಮಶೇಖರ್ ಐದನಾಳ ಮಹಾದೇವಯ್ಯ ಗೌಡುರ ಪ್ರಭುಸ್ವಾಮಿ ಅತ್ತನೂರ ಮಹೇಶ್ ನಂದಿಕೋಲಮಠ ಅಯ್ಯಪ್ಪ ವಕೀಲರು ಶಿವಕುಮಾರ್ ನಂದಿಕೋಲಮಠ ಲಕ್ಷ್ಮೀದೇವಿ ನಡುವಿನಮನಿ ಶಿವಮ್ಮ ಪಟ್ಟದಕಲ್ಲು ಗುರುಬಾಯಿ ಸೇರಿದಂತೆ ಹಲವಾರು ಭಕ್ತರು ಈ ಸಂದರ್ಭದಲ್ಲಿ ಇದ್ದರು.