ದಸರಾ ಕ್ರೀಡಾಕೂಟ : ನವೋದಯ ಸೆಂಟ್ರಲ್ ಸ್ಕೂಲ್ ದ್ವಿತೀಯ ಸ್ಥಾನ

ರಾಯಚೂರು.ಸೆ.೨೨- ಮೈಸೂರಿನ ದಸರಾ ಕ್ರೀಡಾಕೂಟ ಕಲ್ಬುರ್ಗಿ ವಿಭಾಗ ಮಟ್ಟದ ಮಹಿಳಾ ವಿಭಾಗದ ಬಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ರಾಯಚೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿಭಾಗ ಮಟ್ಟದ ಏಳು ಜಿಲ್ಲೆಗಳಾದ ರಾಯಚೂರು, ಗುಲ್ಬರ್ಗ, ಬೀದರ್, ಹೊಸಪೇಟೆ, ಕೊಪ್ಪಳ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅಂತಿಮ ಪಂದ್ಯಕ್ಕೆ ರಾಯಚೂರು ಮತ್ತು ಬಳ್ಳಾರಿ ತೆರ್ಗೆಡೆಗೊಂಡಿದ್ದವು. ನವೋದಯ ಸೆಂಟ್ರಲ್ ಸ್ಕೂಲ್, ರಾಯಚೂರಿನ ಬಾಸ್ಕೆಟ್ ಬಾಲ್ ಟೀಮ್ ಒಳ್ಳೆಯ ಆಟವನ್ನಾಡಿ ರನ್ನರ್ ಅಪ್ ಆಗಿ ತೇರ್ಗಡೆಗೊಂಡಿದೆ.
ಈ ಸಂದರ್ಭದಲ್ಲಿ ಸೆಂಟ್ರಲ್ ಸ್ಕೂಲಿನ ಆಡಳಿತ ಮಂಡಳಿಯ ಮುಖ್ಯಸ್ಥರಾದ ಎಸ್.ಆರ್.ರೆಡ್ಡಿ, ನಿರ್ದೇಶಕರಾದ ನಂದಿಕಾ ರೆಡ್ಡಿ ಮತ್ತು ಶಾಲಾ ಪ್ರಾಂಶುಪಾಲರಾದ ಇಲಿಯಾ ವೈಲೆಟ್, ಉಪ ಪ್ರಾಂಶುಪಾಲರಾದ ಸಾಯಿ ವಿಜಯಭಾರತಿ ಹಾಗೂ ಶಾಲಾ ದೈಹಿಕ ಶಿಕ್ಷಕರಾದ ಇರ್ಫಾನ್ ಖುರೇಷಿ ಮತ್ತು ಎಲ್ಲಾ ಶಿಕ್ಷಕವೃಂದ ಹರ್ಷ ವ್ಯಕ್ತಪಡಿಸಿದರು.