ದಸರಾ ಆಯುಧ ಪೂಜೆಯ ಪ್ರಯುಕ್ತ ಕೃಷಿ ಯಂತ್ರಧಾರೆ ಕಾರ್ಯಕ್ರಮ.

ಕೂಡ್ಲಿಗಿ.ಅ.26:- ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆಯಲ್ಲಿ ದಸರಾ ಆಯುಧ ಪೂಜೆಯ ಪ್ರಯುಕ್ತ ಕೃಷಿ ಯಂತ್ರಧಾರೆ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ಸಿ ಎಚ್ ಎಸ್ ಸಿ ಉತ್ತರ ವಲದ ನಿರ್ಧೆಶಕರಾದ ಲೋಹಿತಾಕ್ಷಾರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡುತ್ತಾ ಗ್ರಾಮೀಣಾ ಭಾಗದ ರೈತರಿಗೆ ಕೈ ಗೆಟುಕುವ ಧರದಲ್ಲಿ ಕೃಷಿ ಯಂತ್ರಗಳನ್ನು ಸಕಾಲದಲ್ಲಿ ದೋರಕಿಸಿಕೊಡುವ ಹಾಗೂ ಕಡಿಮೆ ಬಾಡಿಗೆ ಧರದಲ್ಲಿ ರೈತರಿಗೆ ಯಂತ್ರೋಪಕರಣಗಳನ್ನು ಒದಗಿಸಿ ಕೊಡುವ ಏಕೈಕ ಸಂಸ್ಥೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಎಂದು ತಿಳಿಸುತ್ತ ಗ್ರಾಮೀಣಾ ಭಾಗದ ಜನರಿಗೆ ಅನುಕೂಲವಾಗುವಂತೆ ಈ ಸಂಸ್ಥೆ ಸೌಲಭ್ಯವನ್ನು ಸದುಪಯೋಗ ಪಡೆಯುವಂತೆ ರೈತರಿಗೆ ಸಲಹೆ ನೀಡಿದರು. ಈ ಸಂಧರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಯೋಜನಾ ಆಧಿಕಾರಿಗಳಾದ ಮಂಜುನಾಥ, ಗುಡೇಕೋಟೆ ಕ್ಷೇತ್ರದ ವಲಯ ಮೆಲ್ವೀಚಾರಕರಾದ ಕೆ.ಕರಿಯಪ್ಪ.ವಲಯದ ಪ್ರಬಂಧಕರಾದ ಮಂಜುನಾಥ .ವಲಯದ ಸೇವ ಪ್ರತಿನಿಧಿಗಳು ಆನೇಕ ಗ್ರಾಮದ ರೈತರು ಇತರರು ಭಾಗವಹಿಸಿದ್ದರು.