
(ಸಂಜೆವಾಣಿ ವಾರ್ತೆ)
ಔರಾದ :ಅ.25: ನಾಡ ಹಬ್ಬ ವಿಜಯದಶಮಿ ದಸರಾ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ, ಅದರಂತೆ ತಾಲೂಕಿನ ಮಿನಿ ತುಳಜಾಪೂರ, ಬೆಟ್ಟದ ತಾಯಿ ಖಂಡೆಕೇರಿ, ಭವಾನಿ ಬಿಜಲಗಾಂವ, ದಾಬಕಾ ಗ್ರಾಮ ಸೇರಿದಂತೆ ತಾಲೂಕಿನಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬವು ಒಂದೊಂದು ದಿನ ವಿಶೇಷ ಪೂಜೆ ನಡೆಯುತ್ತವೆ, ಕೊನೆಯ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ, ವಯಸ್ಕರು ಸೇರಿದಂತೆ ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಬನ್ನಿ ವಿನಿಮಯ-ಶುಭ ಕೋರಿಕೆ :
ಹಬ್ಬದ ನಿಮಿತ್ತ ವಿಶೇಷವಾಗಿ ಹೋಳಿಗೆ, ಪಾಯಸಾ ಸೇರಿದಂತೆ ಸಿಹಿ ಪದಾರ್ಥಗಳನ್ನು ಸಿದ್ಧಪಡಿಸಿ ಕುಟುಂಬ ವರ್ಗ, ಆಪ್ತರೊಂದಿಗೆ ಸವಿಯುವುದು. ನಂತರ ಸಾಯಂಕಾಲ ಮಕ್ಕಳು, ಹಿರಿಯರು ಸೇರಿ ಬನ್ನಿ ಮರದ ಪೂಜೆ ಮಾಡಿ ಬನ್ನಿ ಹಂಚಿಕೊಳ್ಳುವ ಮೂಲಕ ಶುಭ ಕೋರಿದರು. ಇನ್ನೂ ಗ್ರಾಮೀಣ ಭಾಗದಲ್ಲಿ ಇದರ ಸಂಭ್ರಮ ಹೆಚ್ಚಾಗಿ ಕಂಡುಬಂದಿತು.