(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.22: ನಗರ ಮತ್ತು ಜಿಲ್ಲೆಯಲ್ಲಿ ರಾಜ್ಯದೆಲ್ಲೆಡೆಯಂತೆ ದಸರ ಹವ್ಬದ ಅಂಗವಾಗಿ ನಾಳೆ ಆಯುಧ ಪೂಜೆ ಮತ್ತು ನಾಡಿದ್ದು ಬನ್ನಿ ಮುಡಿಯುವ ಹಬ್ಬದ ಆಚರಣೆಗೆ ಜನರಿಂದ ಮಾರುಕಟ್ಟೆಯಲ್ಲಿ ಹೂ ಹಣ್ಣು ಖರೀದಿಯ ಭರಾಟೆ ಕಂಡು ಬಂತು.
ನಗರದ ಇಂದಿರಾಗಾಂಧಿ ಸರ್ಕಲ್, ಬೆಂಗಳೂರು ರಸ್ತೆ, ದುರ್ಗಮ್ಮ ಗುಡಿ ಬಳಿ, ಕುಮಾರಸ್ವಾಮಿ ದೇವಸ್ಥಾನ, ಗವಿಯಪ್ಪ ಸರ್ಕಲ್ ಬಳಿ ಸೇರದಂತೆ ವಿವಿಧೆಡೆಗಳಲ್ಲಿ ಬೂದ ಕುಂಬಳಕಾಯಿ, ಬಾಳೆ ಗಿಡ, ಮಾವಿನಎಲೆ, ಹೂ, ವಿವುಧ ಹಣ್ಣುಗಳ ಮಾರಾಟ ನಡೆದಿದೆ.
ಮತ್ತೊಂದು ಕಡೆ ಯಂತ್ರಗಳ ಮೂಲಕ ವಿವಿಧ ಉತ್ಪನ್ನಗಳ ಮಳಿಗೆ, ಶೆಡ್ ಗಳ ಸ್ವಚ್ಚತೆ, ಬಣ್ಣ ಬಳಿಯುವುದು, ವಾಹನಗಳ ಪೂಜೆಗೆ ಜನತೆ ಸಿದ್ದತೆ ನಡೆಸಿದ್ದಾರೆ.
ಕಳೆದ ಒಂದು ವಾರದಿಂದ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ದೇವಿಪುರಾಣದ ಪ್ರವಚನ ನಡೆದಿದೆ. ನಾಳೆ ಸಂಜೆ ಆಯುಧ ಪೂಜೆ ನಡೆಯಲಿದ್ದು. ನಾಡಿದ್ದು ಬೆಳಿಗ್ಗೆ ಬನ್ನಿ ಮರಕ್ಕೆ ವಿಶೇಷ ಪೂಜೆ ಮತ್ತು ಸಂಜೆ ಬನ್ನಿ ಮುಡಿಯುವ ಕಾರ್ಯ ನಡೆಯಲಿದೆ.
ಇದಲ್ಲದೆ ಅಂದು ಸಂಜೆ ನಗರದ ಬ್ರೂಸ್ ಪೇಟೆ ಪ್ರದೇಶದ ನೀಲಕಂಠೇಶ್ವರ, ಸಾಲೇಶ್ವರ, ಬಸವೇಶ್ವರ ಮೊದಲಾದ ದೇವಸ್ಥಾನಗಳಿಂದ ಅಲಂಕೃತ ಪಲ್ಲಕ್ಕಿಗಳ ಮೆರವಣಿಗೆ ಕಲ್ಯಾಣಶ್ರೀಗಳ ಮಠಕ್ಕೆ ಬಂದು ಬನ್ನಿಮುಡಿಯಲಿದೆ.