ದಸಂಸ ಸಭೆ,ರವಿ ಹೇಳಿಕೆಗೆ ಸಂಬಂಧವಿಲ್ಲ

ಮಾಲೂರು:ಮೇ೪:ಏ.೧೮ರಂದು ದಮನಿತರ ಸಂರಕ್ಷಣಾ ಸಮಿತಿ(ದಸಂಸ) ನಮ್ಮ ಸಂಘಟನೆ ವತಿಯಿಂದ ಕರೆಯಲಾಗಿದ್ದ ಸಭೆಗೂ ಹಾರೋಹಳ್ಳಿ ರವಿ ಕೊಟ್ಟಿರುವ ಹೇಳಿಕೆಗೂಯಾವುದೇ ರೀತಿಯ ಸಂಬಂಧ ಇಲ್ಲ ಎಂದು ದಮನಿತರ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ
ಫ್ರೆಂಡ್ಸ್ ಸಂತೋಷ್ ಅವರು ಸ್ಪಷ್ಟಿಕರಿಸಿದರು.ಪಟ್ಟಣದ ದಸಂಸ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸಬೆ ಯಲ್ಲಿ ಭಾಗವಹಿಸಿಮಾತನಾಡಿದರು.ಜನವರಿ ೧ ರಂದು ನಾನು ದಲಿತ ಸಂಘರ್ಷ ಸಮಿತಿ ಸಂಘಟನೆಯ ಸಂಚಾಲಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮೇ ೧೦ ರಂದು ನಡೆಯುವ ವಿಧಾನಸಭಾ
ಚುನಾವಣೆ ವಿಚಾರವಾಗಿ ದ ಸಂ ಸ ಸಭೆ ನಡೆಸಿ ಮಾಲೂರು ತಾಲ್ಲೂಕಿನ ಯುವಕರ ಅಭಿಪ್ರಾಯಗಳನ್ನು ಸಭೆಯಲ್ಲಿ ಚರ್ಚಿಸುವ ಸಲುವಾಗಿ ದಸಂಸ ಸಂಘಟನೆಯ ಎಲ್ಲಾ ಹಳ್ಳಿಯಿಂದ ಯುವ ಮುಖಂಡರುಗಳು ಹಾಗೂ ನನ್ನ ದಸಂಸದ ಕಾರ್ಯಕರ್ತರನ್ನು ದಿನಾಂಕ:ಏಪ್ರಿಲ್ ೧೮ ರಂದು ರಂದು ಪೂರ್ವಭಾವಿ ಸಭೆಯನ್ನು ಕರೆದಿದ್ದು, ಆ ಸಭೆಯಲ್ಲಿ ವಿಧಾನಸಭಾ ಚುನಾವಣೆ ವಿಚಾರವಾಗಿ ಮಾಲೂರು ತಾಲ್ಲೂಕಿನ ಯುವಕರ ಅಭಿಪ್ರಾಯಗಳನ್ನುಸಭೆಯಲ್ಲಿ ಸಂಗ್ರಹಿಸಲಾಗಿದ್ದು ದಸಂಸ ಸಂಘಟನೆಯ ಮುಂದಿನ ನಡೆಯ ಬಗ್ಗೆಯೂ ತೀರ್ಮಾನಿಸಲಾಗಿತ್ತು. ಆದರೆ ಅಂದು ಕೋಲಾರದ ಹಾರೋಹಳ್ಳಿ ರವಿಯವರು
ನಮ್ಮ “ದಸಂಸ” ಸಂಘಟನೆಗೂ ಹಾರೋಹಳ್ಳಿ ರವಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದು ತಿಳಿಸಿದರು.ನಮ್ಮ
ಸಂಘಟನೆ ಪದಾಧಿಕಾರಿಗಳು ಮತ್ತು ಸಂಘಟನಕಾರರ ತೀರ್ಮಾನಗಳಂತೆ ಸಂಘಟನೆಮುಂದೆ ಸಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬೆನ್ನಘಟ್ಟ ಮಂಜುನಾಥ್, ಸಂಚಾಲಕರಾದಸಂಪಂಗೆರೆ ಅಶೋಕ್,ಪ್ರಧಾನ ಕಾರ್ಯದರ್ಶಿ ಜೈಶ್ರೀನಿ ನಾಗಾಸ್,ಜಂಟಿ ಕಾರ್ಯದರ್ಶಿನಾಗರಾಜ ಬೆನ್ನಪಟ್ಟ, ಖಜಾಂಚಿ ಬಾಲು ಡಿ.ಎನ್. ದೊಡ್ಡಿ, ಸಂಘಟನಾ ಸಂಚಾಲಕರಾದಮುನಿರಾಜು ಸೊಣ್ಣೂರು, ನಾರಾಯಣಸ್ವಾಮಿ, ಕಲಾಮಂಡಳ ಸಂಚಾಲಕ ಗೋವಿಂದ್ಸೊಣ್ಣೂರು ಸದಸ್ಯರಾದ ರಮೇಶ್ ಬೇನ್ನಘಟ್ಟ ಚಿನ್ನಯ್ಯ, ದೊಡ್ಡ ಪ್ರಾತಪ್ ಆಹನ್ಯಮೋಹನ್, ಬಾಲು, ಚಲಪತಿ, ಬಾಲಕೃಷ್ಣ, ಸೀತಾನಾಯಕನಹಳ್ಳಿ ರಾಜಪ್ಪ, ಶಿವಕುಮಾರ್, ಎಸ್ ಕೆ ನಾರಾಯಣಸ್ವಾಮಿ ಬಾಲು ಇನ್ನಿತರರು ಇದ್ದರು.