ದಸಂಸ ಸಂಸ್ಥಾಪಕ ಪ್ರೊ|| ಬಿ. ಕೃಷ್ಣಪ್ಪ ಜಯಂತಿ ಅಂಬೇಡ್ಕರ್ ವಾದ ದಿಂದ ಸರಳ ಆಚರಣೆ

ಯಾದಗಿರಿ, ಜೂ.10; ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಸ್ಥಾಪಕ ಪ್ರೊ|| ಬಿ. ಕೃಷ್ಣಪ್ಪ ಅವರ 84ನೇ ಜಯಂತಿಯನ್ನು ಇಲ್ಲಿನ ದಲಿತ ಸಂಘರ್ಷ ಸಮಿತಿ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಂಬೇಡ್ಕರ್ ವಾದ ಜಿಲ್ಲಾ ಸಂಘಟನಾ ಸಂಚಾಲಕ ನಿಂಗಪ್ಪ ಬೀರನಾಳ ಮಾತನಾಡಿ 70ರ ದಶಕದಲ್ಲಿ ದಸಂಸ ಹುಟ್ಟುಹಾಕಿ ಲಕ್ಷ ಲ;ಕ್ಷ ಕಾರ್ಯಕರ್ತರನ್ನು ಒಗ್ಗೂಡಿಸಿ ಸಂಘಟಿಸಿದ ಪರಿಣಾಮ ಅಂದು ದಸಂಸ ಸರ್ಕಾರವೇ ಅಲುಗಾಡಿಸುವಂತಹ ಹೋರಾಟಗಳನ್ನು ರೂಪಿಸಿತ್ತು ಎಂದು ನೆನಪಿಸಿಕೊಂಡರು.
ಜಿಲ್ಲಾ ಸಂ. ಸಂಚಾಲಕ ಅಶೋಕ ನಾಯ್ಕಲ್, ಭೀಮರಾಯ ಬಳಿಚಕ್ರ, ಸಿದ್ದಪ್ಪ ಮಾವಳ್ಳಿ, ತಾಲ್ಲೂಕು ಸಂಚಾಲಕ ನರೇಂದ್ರ ಅನವಾರ, ತಾ. ಸಂ. ಸಂಚಾಲಕ ಚಂದ್ರು ಚಲವಾದಿ ಇನ್ನಿತರರು ಇದ್ದರು.