ದಸಂಸ ಪದಾಧಿಕಾರಿಗಳ ಸಭೆ

ಮಧುಗಿರಿ, ಮೇ ೩೧- ಕನಾ೯ಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ೪೭/೭೪ ವತಿಯಿಂದ ತಾಲ್ಲೂಕಿನ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಸಮಿತಿ ಸಭೆ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಸಂಚಾಲಕ ಹೆಣೂರು ಶ್ರೀನಿವಾಸ್ ವಹಿಸಿದ್ದರು. ನೂತನ ಜಿಲ್ಲಾ ಸಂಚಾಲಕರಾಗಿ ದೊಡ್ಡೇರಿ ಕಣಿಮಯ್ಯ, ಸಂಘಟನಾ ಸಂಚಾಲಕರುಗಳಾಗಿ ಎಂ.ವೈ. ಶಿವಕುಮಾರ್, ಸಿ. ಕೆ. ತಿಪ್ಪೇಸ್ವಾಮಿ, ಪೆದ್ದಣ್ಣ, ಪಾವಗಡ, ಲಕ್ಷ್ಮೀಕಾಂತ, ತಿಪ್ಪೇಸ್ವಾಮಿ, ಸಿರಾ, ನರಸಿಂಹಮೂರ್ತಿ, ಖಜಾಂಚಿ ಹರೀಶ್, ಜಿಲ್ಲಾ ಕಲಾ ತಂಡದ ಸಂಚಾಲಕ ಸಂಜೀವಯ್ಯ ಎಸ್., ತಾಲ್ಲೂಕು ಸಂಚಾಲಕರುಗಳುರಾದ ನಾಗರಾಜ್, ರಮೇಶ್, ಹನುಮಂತರಾಯಪ್ಪ, ಜಿವಿಕೆ ಮಂಜು, ಚಿಕ್ಕಮ್ಮ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.