ದಸಂಸ: ಎನ್ ಮೂರ್ತಿ ಬಣದ ತಾಲೂಕು ಪದಾಧಿಕಾರಿಗಳು ಆಯ್ಕೆ

ಲಿಂಗಸೂಗೂರು: ನ.೨೨ -, ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಸ್ಥಾಪಿತ ) ಲಿಂಗಸಗೂರು ತಾಲೂಕ ಪದಾಧಿಕಾರಿಗಳ ಆಯ್ಕೆಯು ವಿಭಾಗಿಯ ಅಧ್ಯಕ್ಷ ಬಸವರಾಜ ಸಾಸಲಮಾರಿ ಅವರ ಆದೇಶದಂತೆ ಜಿಲ್ಲಾ ಅಧ್ಯಕ್ಷ ಅಶೋಕ ನಂಜಲದಿನ್ನಿ ಅವರ ಅದ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಪದಾಧಿಕಾರಿಗಳ ಸಹಯೋಗದೊಂದಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಶಿವಗ್ಯಾನಪ್ಪ ಸರ್ಜಾಪುರ, ತಾಲೂಕ ಅಧ್ಯಕ್ಷರಾಗಿ ಬಸವರಾಜ ಕುಣೆಕೆಲ್ಲೂರ, ಕಾರ್ಯ ಅಧ್ಯಕ್ಷರಾಗಿ ಹುಲಗಪ್ಪ ನಿಲೋಗಲ್, ಉಪಾಧ್ಯಕ್ಷರಾಗಿ ಶಿವಪ್ಪ ಆನೆಹೊಸೂರು, ಹುಲಗಪ್ಪ ಪೂಜಾರಿ ಜೂಲಗುಡ್ಡ, ಬಾಳಪ್ಪ ಗೊರೆಬಾಳ, ಪ್ರಧಾನ ಕಾರ್ಯದರ್ಶಿ ಬಸವರಾಜ ಆನೆಹೋಸುರ, ಸಂಘಟನಾ ಕಾರ್ಯದರ್ಶಿಯಾಗಿ ಮೌನೇಶ್ ಐದನಾಳ, ತಾಲೂಕ ಕಾರ್ಯದರ್ಶಿಯಾಗಿ ಕಿರಣ್ ಕುಮಾರ ಚಿಕ್ಕಹೆಸರೂರ, ಲಿಂಗಸಗೂರ ನಗರ ಘಟಕ ಅಧ್ಯಕ್ಷರಾಗಿ ಮಲ್ಲೇಶಪ್ಪ ಯಲಾಗಲದಿನ್ನಿ, ಹಿಂದುಳಿದ ಘಟಕ ಅಧ್ಯಕ್ಷರಾಗಿ ಚಂದ್ರು ಮಡಿವಾಳರ, ಕಾರ್ಮಿಕ ಅಧ್ಯಕ್ಷರಾಗಿ ಲಿಂಗಪ್ಪ ಹಟ್ಟಿ, ಖಜಾಚಿಯಾಗಿ ಹುಲಗಪ್ಪ ಬೆಂಡೋಣಿ, ಕಾರ್ಯಕಾರಿ ಸದಸ್ಯರಾಗಿ ಕಾಡಪ್ಪ ಯರಗುಂಟಿ ಈ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.