ದಸಂಸ ಅಧ್ಯಕ್ಷರಾಗಿ ರಾಮಣ್ಣ ಹೊನ್ನಳ್ಳಿ ಹಟ್ಟಿ ನೇಮಕ

ಲಿಂಗಸುಗೂರು,ಜು,೧೯- ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಾಮಾಜಿಕ ನ್ಯಾಯಕ್ಕಾಗಿ ಚಳುವಳಿ) ಜಿಲ್ಲಾ ಅಧ್ಯಕ್ಷ ಬಸವರಾಜ ನಕ್ಕುಂದಿ ಇವರ ಆದೇಶದ ಮೇರೆಗೆ ಲಿಂಗಸುಗೂರು ತಾಲೂಕು ಪದಾಧಿಕಾರಿಗಳ ನೇಮಕ ಮಾಡಲಾಯಿತು ಅಧ್ಯಕ್ಷರಾಗಿ ರಾಮಣ್ಣ ಹೊನ್ನಳ್ಳಿ ಹಟ್ಟಿಯವರನ್ನು ನೇಮಕ ಮಾಡಲಾಯಿತು.
ಪದಾಧಿಕಾರಿಗಳ ಆಯ್ಕೆ : ತಾಲೂಕ ಗೌರವ ಅಧ್ಯಕ್ಷರಾದ ಶಿವರೆಡ್ಡಿ ಲಿಂಗಸುಗೂರು, ಫಕೀರಪ್ಪ ಹಟ್ಟಿ, ಹನುಮಂತ ಜಾಲಿಬೆಂಚಿ, ಕಾನೂನು ಸಲಹೆಗಾರ ಶಶಿಧರ ಹೊಸಮನಿ, ತಾಲೂಕ ಪ್ರಧಾನ ಕಾರ್ಯದರ್ಶಿ ಅಮರೇಶ ಗುಡದನಾಳ, ಉಪಾಧ್ಯಕ್ಷ ಶರಣಬಸವ ಗುಡದನಾಳ, ಸಂಘಟನೆ ಕಾರ್ಯದರ್ಶಿ ಚನ್ನಬಸವ ಹಟ್ಟಿ, ಸಹ ಕಾರ್ಯದರ್ಶಿ ಫಾರೂಕ್ ಲಿಂಗಸುಗೂರು, ಕಾರ್ಯದರ್ಶಿ ಶಾನಾವಾಜ್, ಖಜಾಂಚಿ ನರಸಪ್ಪ ಮಂಡಲಗುಡ್ಡ ಹಟ್ಟಿ ಇವರನ್ನು ಜಿಲ್ಲಾ ಅಧ್ಯಕ್ಷ ಹಾಗೂ ಗುಲಬರ್ಗಾ ವಿಭಾಗಿಯ ಪ್ರಧಾನ ಕಾರ್ಯದರ್ಶಿ ಉಮೇಶ್ ಐಹೊಳೆರ ನೇತೃತ್ವದಲ್ಲಿ ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.
ನಂತರ ಉಮೇಶ್ ಐಹೊಳೆರ ಮಾತನಾಡಿ, ಸಂಘಟನೆಯ ಸಿದ್ದಾಂತಕ್ಕೆ ಬದ್ದಾರಾಗಿ ದಲಿತರ ಏಳಿಗೆಗಾಗಿ ನ್ಯಾಯಯುತವಾದ ಹೋರಾಟ ಮಾಡಲು ಸಂಘಟನೆಯನ್ನು ಬಲಪಡಿಸಿದೆ ಎಂದು ಹೇಳಿದರು.