
ಹಗರಿಬೊಮ್ಮನಹಳ್ಳಿ ಮಾ.೩೧ ತಾಲೂಕಿನ ದಶಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಣ್ಯಪುರ ಗ್ರಾಮದ ನಾಣ್ಯ ಪುರ 05 ಕ್ಷೇತ್ರಕ್ಕೆ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯ ಫಲಿತಾಂಶಕ್ಕೆ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಇಂದು ಮತ ಎಣಿಕೆ ಕಾರ್ಯ ನಡೆಯಿತು.
ಈ ವೇಳೆ ಪಲಿತಾಂಶ ಪ್ರಕಟಗೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಗರಾಜ 311 ಮತ ಪಡೆದುಕೊಂಡರು ಪ್ರತಿಸ್ಪರ್ಧೆ ಕೆ ಮರಿಯಪ್ಪ 323 ಮತ ಪಡೆಯುವ ಮೂಲಕ ಜಯ ಗಳಿಸಿದರು ಎಂದು ಚುನಾವಣೆ ಅಧಿಕಾರಿ ವಿ.ರಮೇಶ್ ಪತ್ರಿಕೆಗೆ ತಿಳಿಸಿದ್ದಾರೆ.