
ರಾಮನಗರ, ಮಾ.೩೧- ತೀವ್ರ ವಿವಾದದಕ್ಕೆ ಗುರಿಯಾಗಿದ್ದ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೆ ಸಂಚಾರ ಮತ್ತಷ್ಟು ದುಬಾರಿಯಾಗಿದ್ದು,ಟೋಲ್ ಸಂಗ್ರಹ ಆರಂಭವಾದ ೧೭ ದಿನದಲ್ಲೇ ಮತ್ತೆ ಟೋಲ್ ದರ ಹೆಚ್ಚಳವಾಗಿದೆ.ನಾಳೆಯಿಂದಲೇ (ಏ.೧) ಈ ಪರಿಷ್ಕೃತ ದರವು ಜಾರಿಗೆ ಬರಲಿದೆ. ಶೇಕಡಾ ೨೨ರಷ್ಟು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ ೨೦೦೮ರ ಪ್ರಕಾರ ಟೋಲ್ ದರ ಹೆಚ್ಚಳವಾಗಲಿದೆ ಎಂದು ಮೂಲಗಳು ತಿಳಿವೆ.ಎಷ್ಟು ದರ ಹೆಚ್ಚಳ: ಕಾರು, ವ್ಯಾನ್, ಜೀಪ್‌ಗಳ ಏಕಮುಖ ಟೋಲ್ ಅನ್ನು ೧೩೫ ರೂ.ರಿಂದ ೧೬೫ಕ್ಕೆ ಏರಿಸಲಾಗಿದೆ.
ದ್ವಿಮುಖ ಸಂಚಾರ ದರವು ೨೦೫ ರೂ.ರಿಂದ ೨೫೦ಕ್ಕೆ ಏರಿಕೆಗೊಂಡಿದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ ೨೨೦ ರೂ.ರಿಂದ ೨೭೦ಕ್ಕೆ ಹಾಗೂ ದ್ವಿಮುಖ ಸಂಚಾರಕ್ಕೆ ೪೦೫ ರೂ. (೭೫ ಹೆಚ್ಚಳ) ನಿಗದಿಯಾಗಿದೆ.ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳ ಏಕಮುಖ ಟೋಲ್ ಬರೋಬ್ಬರಿ ೫೬೫ ರೂ.ಗಳಿಗೆ ಏರಿಕೆ ಆಗಿದೆ (೧೦೫ ರೂ. ಹೆಚ್ಚಳ). ದ್ವಿಮುಖ ಸಂಚಾರಕ್ಕೆ ೮೫೦ ರೂ. ನಿಗದಿಪಡಿಸಲಾಗಿದೆ (೧೬೦ ರೂ. ಹೆಚ್ಚಳ).೩ ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವು ೬೧೫ ರೂ.(೧೧೫ ರೂ. ಏರಿಕೆ) ಹಾಗೂ ದ್ವಿಮುಖ ಸಂಚಾರಕ್ಕೆ ೯೨೫ ರೂ. (೨೨೫ ರೂ. ಹೆಚ್ಚಳ) ಏರಿದೆ. ಭಾರಿ ವಾಹನಗಳ ಏಕಮುಖ ಟೋಲ್ ೮೮೫ ರೂ. (೧೬೫ ರೂ. ಹೆಚ್ಚಳ), ದ್ವಿಮುಖ ಸಂಚಾರಕ್ಕೆ ೧,೩೩೦ ರೂ. (೨೫೦ ರೂ. ಹೆಚ್ಚಳ) ನಿಗದಿ ಆಗಿದೆ. ೭ ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ದರವು ೧,೦೮೦ ರೂ. (೨೦೦ ರೂ. ಹೆಚ್ಚಳ) ಹಾಗೂ ದ್ವಿಮುಖ ಸಂಚಾರಕ್ಕೆ ೧,೬೨೦ ರೂ. (೩೦೫ ರೂ. ಏರಿಕೆ) ನಿಗದಿ ಆಗಿದೆ.ಒಟ್ಟಿನಲ್ಲಿ ಟೋಲ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹೆದ್ದಾರಿ ಪ್ರಾಧಿಕಾರ ಜನಸಾಮಾನ್ಯರನ್ನ ಲೂಟಿ ಮಾಡುತ್ತಿದೆ ಕಿಡಿಕಾರಿದ್ದಾರೆ.
ಟೋಲ್ ಸಂಗ್ರಹ ಹೆಚ್ಚಳ..!
ಪ್ರಧಾನಿ ನರೇಂದ್ರ ಮೋದಿ ಇದೇ ಮಾರ್ಚ್ ೧೨ರಂದು ಈ ಹೆದ್ದಾರಿಯನ್ನು ಉದ್ಘಾಟಿಸಿದ್ದರು. ಮಾ. ೧೪ರಿಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಕಿ ಹಾಗೂ ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಆರಂಭಗೊಂಡಿತ್ತು. ಇದೀಗ ೧೭ ದಿನದಲ್ಲೇ ಟೋಲ್ ಸಂಗ್ರಹ ಹೆಚ್ಚಳ ಮಾಡಲಾಗಿದೆ.