ದಶಕದ ಬಳಿಕ ನಿರ್ದೇಶನ `ಕೆಕೆ’ ಕಿಚ್ಚನ ನಯಾ ದುನಿಯಾ

* ಚಿ.ಗೋ ರಮೇಶ್

ಕಿಚ್ಚ ಸುದೀಪ್ ಯಾವಾಗ ಮತ್ತೆ ನಿರ್ದೇಶನಕ್ಕೆ ಮರಳುತ್ತಾರೆ ಎನ್ನುವ ಬಹು ವರ್ಷಗಳ ಕಾತುರತೆ ಹಾಗು ಅಭಿಮಾನಿಗಳ ಕನವರಿಕೆಗೆ ಉತ್ತರ ಸಿಕ್ಕಿದೆ.

ಇಂತಹದೊಂದು ಅಸಾದ್ಯವಾದ ಕೆಲಸವನ್ನು ಸಾದ್ಯವಾಗಿಸಿದ್ದಾರೆ ನಿರ್ಮಾಪಕರಾದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್.

ನಟ ಕಿಚ್ಚ ಸುದೀಪ್, ” ಕೆಕೆ”  ಚಿತ್ರದ ಮೂಲಕ  ಹೊಸ ದುನಿಯಾವನ್ನು ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದಾರೆ.   ಮಾಣಿಕ್ಯ ” ಚಿತ್ರ ತೆರೆಗೆ ಬಂದು ದಶಕದ ಬಳಿಕ “ಕೆಕೆ” ಚಿತ್ರದ ಮೂಲಕ  ಕಿಚ್ಚ ಸುದೀಪ್  ನಿರ್ದೇಶನಕ್ಕೆ ಮರಳಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ.

“ದೇವರು ಕ್ಷಮಿಸಬಹುದು ಆದರೆ ನಾನು ಕ್ಷಮಿಸುವುದಿಲ್ಲ ..”  ಎನ್ನುವ ಅಡಿ ಬರಹದೊಂದಿಗೆ ಚಿತ್ರ ಕುತೂಹಲ ಹೆಚ್ಚುವಂತೆ ಮಾಡಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವ ಸಾದ್ಯತೆಗಳಿವೆ. ಕಿಚ್ಚನ ಹುಟ್ಟುಹಬ್ಬಕ್ಕೆ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ.

ಮೈ ಆಟೋಗ್ರಾಫ್’ ಚಿತ್ರದ ಮೂಲಕ ನಿರ್ದೇಶಕರಾದ ಸುದೀಪ್, ಇದುವರೆಗೂ ಆರು ಚಿತ್ರಗಳನ್ನು ನಿರ್ದೇಶನ ಮಾಡಿದ್ದು, ‘ಕೆಕೆ’ ಅವರ ನಿರ್ದೇಶನದ ಏಳನೇ ಚಿತ್ರವಾಗಿದೆ. ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದ ಆರನೇ ಚಿತ್ರವಾಗಿದೆ . ‘ರತ್ನನ್ ಪ್ರಪಂಚ’ ಚಿತ್ರದ ಮೂಲಕ ಪ್ರಾರಂಭವಾದ ಕೆ ಆರ್ ಜಿ ಸ್ಟುಡಿಯೋಸ್ ಚಿತ್ರ ಪಯಣ, ಸತತವಾಗಿ ಮುಂದುವರೆಯುತ್ತಿದೆ.

ಸುದೀಪ್ ನಿರ್ದೇಶನದಲ್ಲಿ ಚಿತ್ರ ನಿರ್ಮಿಸುತ್ತಿರುವ ಕುರಿತು ಮಾತನಾಡುವ ಕಾರ್ತಿಕ್ ಗೌಡ, ‘’ಹುಚ್ಚ’ ಚಿತ್ರದಿಂದ ನಾನು ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಜೊತೆಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. ಆ ಕನಸು ಇದೀಗ ನನಸಾಗುತ್ತಿದ್ದು, ಅವರು ನಟನೆಯ ಜೊತೆಗೆ ನಿರ್ದೇಶನ ಸಹ ಮಾಡುತ್ತಿರುವುದು ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಒಂದರ ಮೇಲೆ ಒಂದು ಸಿನಿಮಾ

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ 46 ನೇ ಚಿತ್ರಕ್ಕೆ ” ಮ್ಯಾಕ್ಸ್ ” ಎಂದು ಹೆಸರಿಡಲಾಗಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಇನ್ನೂ ಆರ್. ಚಂದ್ರು ಅವರು ನಟ ಸುದೀಪ್ ಅವರಿಗಾಗಿ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.ಈ ಚಿತ್ರಕ್ಕೆ ತೆಲುಗಿನ ಹೆಸರಾಂತ ಕಥೆಗಾರ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಕೆಲಸದಲ್ಲಿ  ಸಾಥ್ ನೀಡಿದ್ದಾರೆ.

ಇನ್ನು ತಮಿಳಿನ ಖ್ಯಾತ ನಿರ್ದೇಶಕ ಚೇರನ್ ಅವರ ನಿರ್ದೇಶನದಲ್ಲಿ ಸುದೀಪ್ ನಟಿಸುತ್ತಿದ್ದಾರೆ.ಒಂದರ ಹಿಂದೆ ಚಿತ್ರಗಲ್ಲಿ ಕಿಚ್ಚ ಸುದೀಪ್ ಬ್ಯುಸಿಯಾಗಿದ್ದಾರೆ.