ದಶಕಗಳ ಕಾಲ ವಯೋವೃದ್ಧರಿಗೆ ಆಸರೆಯಾದ ಭಾರತಾಂಬೆ ನಿರಾಶ್ರೀತರ ಕೇಂದ್ರ

ಶಹಾಪುರ:ವೃದ್ಧಾವಸ್ಥೆಯಲ್ಲಿ ನೊಂದವರಿಗೆ ನೆರಳಾಗಿ, ಬೆಂದವರಿಗೆ ಆಸರೆಯಾಗಿ, ಸುಮಾರು 12 ವರ್ಷಗಳ ಕಾಲ ನಿತ್ಯ ನಿರಂತರ ವಯೋವೃದ್ಧರಿಗಾಗಿ, ಜೀವನಾಧಾರವಾಗಿ ಶಹಾಪುರ ತಾಲುಕಿನ ಬೆನಕನಹಳ್ಳಿಯ ಸಾಮಾಜಿಕ ಕಾರ್ಯಕರ್ತರಾಗಿ, ನೊಂದವರ ದ್ವನಿಯಾಗಿ ನಿಂತ ಭೀಮಾಶಂಕರ ದೊಡ್ಮನಿಯವರ ಸ್ಥಾಪಿತ ಭಾರತಾಂಬೆ ಸ್ವಯಂ ಸೇವಾ ಸಂಸ್ಥೆ ಜನ ಮಾನಸದಲ್ಲಿ ಹೆಸರು ಮಾಡಿದೆ. ಜನಸೇವೆಯೇ ಜನಾರ್ಧನ ಸೇವೆ ಎಂದು ನಂಬಿಕೆನ್ನು ಮೈಗೂಡಿಸಿಕೊಂಡ ಭೀಮಾಶಂಕರ ರವರು, ಸಮಾಜ ಸೇವೆಯೋಂದಿಗೆ ವಯೋವೃದ್ಧರಿಗೆ ತೀರಾ ವಯಸ್ಸಿನ ಕ್ಷೀಣತೆಯಲ್ಲಿ ನರಳುವ ವಯೋವೃದ್ಧರಿಗೆ, ಪ್ರತಿದಿನ ಅವರ ಆರೋಗ್ಯದ ಆರೈಕೆ ಮತ್ತು ಊಟ ಉಪಚಾರಗಳನ್ನು ನೀಡಿ ಮಾತೃಸ್ವರೂಪಭಾವನೆಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡು, ಸೇವೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಸಮಾಜದಲ್ಲಿ ಅಶಕ್ತರು, ನಿರ್ಗತಿಕರು, ನಿಸ್ಸಾಯಕರು, ಜೀವನವೇ ಬೇಡವೆಂದು ಸಾಯುವ ಮನಸ್ಥತಿಗೆ ಬಂದಿರುವ ಅದೇಷ್ಟೋ ಜನರಿಗೆ ಕೌನ್ಸಿಲಿಂಗ್ ಮಾಡಿ, ಅವರ ಮನಸ್ಸಿಗೆ ಚೈತನ್ಯತುಂಬಿ, ಮರು ಜೀವ ಕಲ್ಪಿಸಿರುವ ಮನೋವೈಜ್ಞಾನಿಕತೆಯಿಂದ ಪರಿವರ್ತಿಸಿ, ನೊಂದವರಿಗೆ ಪುನಃ ಬದುಕಿನ ಮುಖ್ಯವಾಹಿನಿಗೆ ತರುವಲ್ಲಿ ಶ್ರಮದ ಪಾತ್ರ ಅಂತ್ಯಂತ ಮಹತ್ವದ್ದಾಗಿರುತ್ತದೆ. ಇಂತಹ ಪ್ರಕಾರ್ಯಗಳನ್ನು ಮಾಡುತ್ತಾ ವಯೋವೃದ್ದರಿಗೂ ಮತ್ತು ಸಮಾಜಕ್ಕೂ ಮಾದರಿಯ ಪರಿಕಲ್ಪನೆಗಳನ್ನೂ ನೀಡುವಲ್ಲಿ ಭೀಮಾಶಂಕರ ದೊಡ್ಮನಿಯವರು ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾದಗಿರಿ ಮತ್ತು ಶಹಾಪೂರ ನಗರದಲ್ಲಿ ನಿರಾಶ್ರಿತರ ಕೇಂದ್ರಗಳನ್ನು ಸ್ಥಾಪಿಸಿ, ಕಣ್ಣಿಗೆ ಕಾಣುವ ವೃದ್ದರನ್ನು ಆಶ್ರಯ ಕೇಂದ್ರಕ್ಕೆ ಕರೆತಂದು, ಅವರ ಕೊಳೆಯಾದ ಬಟ್ಟೆ ಬಿಡಿಸಿ, ಬಿಸಿ ನೀರಿನಿಂದ ಸ್ನಾನ ಮಾಡಿಸಿ ಹೊಸ ವಸ್ತ್ರಗಳನ್ನು ತೊಡಿಸಿ, ಊಟ ಉಪಚಾರಗಳನ್ನು ನೀಡಿ ಸಾಂತ್ವಾನದ ಮಾತುಗಳನ್ನು ಹೇಳಿ, ಸಂತೈಸಿ ಕುಟುಂಬದ ಹಾರೈಕೆಯಂತೆ ನೋಡಿಕೊಂಡು ಅವರ ಸುಖ ದುಖಃಗಳಲ್ಲಿ ಭಾಗವಹಿಸುವುದೇ ಇವರ ಜಾಯಮಾನವಾಗಿದೆ. ಅಲ್ಲದೇ ಅವರನ್ನು ಕೌನ್ಸಲಿಂಗ್ ಮಾಡುವಾಗ ತಮ್ಮ ಜೀವನದ ಎಲ್ಲಾ ನೋವುಗಳಿಂದ ಹೊರಬರುಂತೆ ಮನ ಪರಿವರ್ತನೆಮಾಡಿ ಅವರ ಜೀವನಕ್ಕೆ ಸರಿಯಾದ ಮಾರ್ಗದರ್ಶನ ಮಾಡುತ್ತಾರೆ. ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಸಕಲ ಸೌಲಬ್ಯಗಳಿಂದ ತುಂಬಿದ್ದರು, ಮಾನಸಿಕವಾಗಿ ನೊಂದಿರುತ್ತಾರೆ ಅಂತವರಿಗೆ ಬೇಕಾಗಿರುವದು ಮನ ಪರಿವರ್ತನೆಯ ಮಧುರ ಮಾತುಗಳು ಮಾತ್ರ ಎನ್ನುವುದನ್ನು ಅರ್ಥೈಸಿಕೊಳ್ಳಬೇಕಿದೆ.

ಪ್ರಥಮದಲ್ಲಿ ಮಾತೃಧಾಮ ವೃದ್ಧಾಶ್ರಮ,

2015ರಲ್ಲಿ ಮಾತೃಧಾಮ ವೃದ್ಧಾಶ್ರಮ ಸ್ಥಾಪಿಸಿ, ನೊಂದು ಬಳಲಿ ಬಂದವರಿಗೆ ಅನ್ನನೀಡಿ ಆಶ್ರಯ ನೀಡುವ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿದ್ದು ಅಲ್ಲದೇ, ಇವರ ಕೆಲಸ ಮೆಚ್ಚಿ ಜಿಲ್ಲಾಧಿಕಾರಿಗಳು ಸಮೇತ ತಾಲೂಕಾ ಮಟ್ಟದ ಅಧಿಕಾರಿಗಳು ಬೇಟಿನೀಡಿ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಪರೋಪಕಾರದ ಕಾರ್ಯಗಳು ನಿತ್ಯ ನಿರಂತರವಾಗಿರಲಿ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ಕಾರ್ಯಗಳಿಗೆ ಸಂಸ್ಥೆಯ ಸಾಧನೆಗಳಿಗೆ ಗೆಳೆಯರ ಬಳಗ ಶ್ರಮದ ಫಲಗಳಿಂದ ಇಂದು ಸಂಸ್ಥೆ ಮಾಧರಿಯಾಗಿದೆ. ಅಮಲಯ್ಯ ಅರಳಳ್ಳಿ, ಮಲ್ಲಪ್ಪ ರೋಜಾ, ಮಲ್ಲಿಕಾರ್ಜುನ ಕೊಂಕಲ್ ವೆಂಕಟೇಶ, ಮತ್ತು ಗುರುಲಿಂಗಪ್ಪ ಇವರುಗಳು ಸಂಸ್ಥೆಯ ಅವಿಭಾಜ್ಯ ಅಂಗಗಳಾಗಿದ್ದಾರೆ.

ಕೊರೋನಾ ಸಂದಿಗ್ದತೆಯಲ್ಲಿ ಹಲವಾರು ವಯೋವೃದ್ದರಿಗೆ ಆಶ್ರಯ :

ಮಾರ್ಚ-22 ರಿಂದ ಮಹಾಮಾರಿ ಕೊರೊನ ದಿಂದ ದೇಶವೇ ಕಾರ್ಗತ್ತಲ ಲಾಕ್‍ಡೌನ್‍ನಲ್ಲಿ ಮುಳುಗಿದಾಗ, ಭಾರತಾಂಬೆ ಸಂಸ್ಥೆಯ ಸ್ವಯಂ ಸೇವಕರು ನಿರ್ಗತಿಕರ ಸೇವೆ ಜೊತೆಗೆ ಹಸಿದ ಜೀವಿಗಳಿಗೆ ನಿರತರವಾಗಿ ಆಹಾರದ ಪೊಟ್ಟಣ ಮತ್ತು ನೀರಿನ ಬಾಟಲ್‍ಗಳು ವಿತರಿಸುವ ಕಾರ್ಯ ಮಾಡುತ್ತಾ ಸುಮಾರು ಮೂರು ತಿಂಗಳು ಕಾಲ 24*7 ರಂತೆ ಸಮಾಜ ಸೇವೆ ಮಾಡಿ ಎಲೆಮರೆ ಕಾಯಿಯಾಗಿ ಕಾರ್ಯನಿರ್ವಹಿಸಿರುವ ಭೀಮಾಶಂಕರ ಬೆನಕನಹಳ್ಳಿ ರವರ ಬಳಗದ ಈ ಸಂಸ್ಥೆಗೆ ಸಾವಿರಕ್ಕೂ ಅಧಿಕ ವಯೋವೃದ್ಧರು, ನಿರಾಶ್ರಿತರು ಆಶ್ರಯಪಡೆದುಕೊಂಡು ಆರೊಗ್ಯದಿಂದ ಮರಳಿದ್ದಾರೆ. ನಿರಾಶ್ರಿತ ಕೇಂದ್ರ ನಿರ್ಗಮಿಸುತ್ತಿದ್ದಾಗ ಅನೇಕ ಜನ ವೃದ್ದರು ತಮ್ಮ ಆಶಾಭಾವನೆಗಳನ್ನು ವ್ಯಕ್ತಪಡಿಸಿ ನಿಮ್ಮ ಕಾರ್ಯಗಳು ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಲೆಂದು ಹಾರೈಸಿದ್ದಾರೆ.


“ನಗರ ವಸತಿ ರಹಿತ ನಿರಾಶ್ರಿತರ ಕೇಂದ್ರ ನಡೆಸುತ್ತಿರುವ ಭಾರತಾಂಬೆ ಸಂಸ್ಥೆಯ ಸ್ವಯಂ ಸೇವಕರು ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಇವರ ಸೇವೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಹೊಂದಲಿ”.

        - ಶ್ರೀ ದುರ್ಗಪ್ಪ ನಾಯಕ, ಸಮುದಾಯ ಸಂಘಟಕರು ನಗರಸಭೆ ಶಹಾಪುರ

“ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರಾಶ್ರಿತರಿಗಾಗಿ ಸ್ವಯಂ ಪ್ರೇರಣೆಯಿಂದ ಯಾವುದೇ ಆಸೆ ಆಕಾಂಕ್ಷೇಗಳಿಲ್ಲದೇ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಭಾರತಾಂಬೆ ಸಂಸ್ಥೆಯು ಒಂದಾಗಿದೆ”

         - ಶ್ರೀ ಗುರುಪಾದ ತಳವಾರ, ಅಭಿಯಾನ ವ್ಯವಸ್ಥಾಪಕರು ನಗರಸಭೆ ಶಹಾಪುರ