ದಳವಾಯಿ ಅವರಿಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ

ಅರಕೇರಾ,ಜ.೧೧- ಬಿ.ಗಣೇಕಲ್ ಗ್ರಾಮ ಪಂಚಾಯತ ಸದಸ್ಯರಾದ ಆಂಜನೇಯ್ಯ ದಳವಾಯಿ ಇವರು ರಾಜ್ಯ ಮಟ್ಟದ ಕರ್ನಾಟಕ ಸೇವಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶ್ರೀ ದುರ್ಗಾ ಪೌಂಡೇಶನ ಟ್ರಸ್ಟ್ ಮೈಸೂರು ವತಿಯಿಂದ ರವೀಂದ್ರ ಕಲಾ ಕ್ಷೇತ್ರ ಬೆಂಗಳೂರಿನಲ್ಲಿನಲ್ಲಿ ಏರ್ಪಡಿಸಲಾದ ಈ ಪ್ರಶಸ್ತಿಯು ಸಮಾಜಮುಖಿ ಕಾರ್ಯಗಳಲ್ಲಿ,ಸಾಹಿತ್ಯ,ಕಲೆ,ಸಂಸ್ಕೃತಿ,ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಮಜಕ್ಕೆ ಕೊಡುಗೆ ನೀಡಿರುವ ಮಹನೀಯರಿಗೆ ಸಮಾಜ ಸುಧಾರಣೆ ಬದ್ದರಾಗಿ ಕೆಲಸಮಾಡುತ್ತಿರುವ ಸಾಧಕರಿಗೆ ದಿನಾಂಕ ೧೭-೧-೨೦೨೩ ರಂದು ಬೆಳಿಗ್ಗೆ ೯.೩೦ಕ್ಕೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಪಡೆಯಲಿದ್ದಾರೆ.