ದಲ್ಲಾಳಿಗಳ ಹಾವಳಿ ತಡೆಗೆ ಒತ್ತಾಯ

ಕೋಲಾರ,ಮಾ.೨೪: ಜಿಲ್ಲೆಯ ಸಾರಿಗೆ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿಯೂ ಹೆಚ್ಚಾಗಿದ್ದು, ಇದನ್ನು ತಡೆಗಟ್ಟುವಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯೂ ಸಂಪೂರ್ಣ ವಿಫಲವಾಗಿದೆ ಎಂದು ರೈತ ಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಅವರು ಆರ್‍ಟಿಓ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅವಧಿ ಮೀರಿದ ಶಾಲಾ ಕಾಲೇಜು ವಾಹನಗಳು ರಾಜಾರೋಷವಾಗಿ ಸರಕಾರಿ ನಿಯಮಗಳನ್ನು ಗಾಳಿ ತೂರಿ ಸಂಚಾರ ನಡೆಸುತ್ತಿದ್ದರೂ ಸಹ, ಅಧಿಕಾರಗಳು ತಮ್ಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಇರುವುದು ಬೇಸರ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದದರು.
ಆರ್‍ಟಿಓ ಇಲಾಖೆಯಲ್ಲಿ ದ್ವಿಚಕ್ರ ವಾಹನ ಪರವಾನಿಗೆಗಳಿಗೆ ಡಿ.ಎಲ್ ಮತ್ತು ಇತರೇ ದಾಖಲೆಗಳಿಗೆ ದಲ್ಲಾಳಿಗಳು ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ದೂರಿದರು.
ಕೋಲಾರ ಜಿಲ್ಲೆಯ ಗಡಿ ಭಾಗವಾದ ನಂಗಲಿ ಚೆಕ್ ಪೊ?ಸ್ಟ್‌ನಲ್ಲಿ ಹೊರ ರಾಜ್ಯಗಳಿಂದ ಬರುವ ಸರಕು ಸರಬರಾಜು ವಾಹನಗಳನ್ನು ತಪಾಸಣೆ ಮಾಡಬೇಕಾದ ಅಧಿಕಾರಿಗಳು ವಸೂಲಿ ದಂಧೆಯಲ್ಲಿ ತೊಡಗಿ ಯಾವುದೇ ವಾಹನಗಳನ್ನು ಪರಿಶೀಲನೆ ಮಾಡದೆ ಹಣ ಪೀಕುವ ಸೇವೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಾಧ್ಯಂತ ಚೆಕ್ ಪೋಸ್ಟ್ ಗಳಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಅಧಿಕಾರಿಗಳು ಕಡಿವಾಣ ಹಾಕಬೇಕು. ಇಲ್ಲದೆ ಹೋದರೆ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಿಯೋಗದಲ್ಲಿ ರೈತ ಮುಖಂಡರಾದ ಕೆ.ಬಿ ಮುನಿವೆಂಕಟಪ್ಪ, ಯಲವಾರವಿಶ್ವನಾಥಗೌಡ, ಕೆ.ಆರ್. ರವಿ, ವೆಂಕಟಾಚಲಪತಿ, ತ್ಯಾಗರಾಜ್, ಮಕ್ಸೂದ್, ಅಮಾನ್ ಉಪಸ್ಥಿತರಿದ್ದರು.