ದಲಿತ ಹಿಂದುಳಿದವರ ಅಭಿವೃದ್ದಿ ಬಿಜೆಪಿಯಿಂದ ಸಾಧ್ಯ: ದೇವಿಂದ್ರನಾಥ ನಾದ್

ಚಿತ್ತಾಪುರ: ನ.13:ಪರಿಶಿಷ್ಟ ಜಾತಿ, ಪಂಗಡದವರ ಹಾಗೂ ಹಿಂದುಳಿದ ವರ್ಗದವರ ಅಭಿವೃದ್ದಿ ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ದೇವಿಂದ್ರನಾಥ ನಾದ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಯ ಮೀಸಲಾತಿ ಶೇ.15 ಇದ್ದಿದ್ದನ್ನು ಶೇ.17 ಹಾಗೂ ಪರಿಶಿಷ್ಟ ಪಂಗಡದವರ ಮೀಸಲಾತಿ ಶೇ.3ರಷ್ಟು ಇದ್ದಿದ್ದನ್ನು ಶೇ.7 ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿ ಸರಕಾರ ಸುಗ್ರೀವಾಜ್ಞೆ ಹೊರಡಿಸಿರುವುದು ಐತಿಹಾಸಿಕ ನಿರ್ಧಾರವಾಗಿದೆ ಹಿಂದಿನ ಯಾವ ಸರಕಾರಗಳು ಮನಸ್ಸು ಮಾಡಿರಲಿಲ್ಲ ಆದರೆ ಪ್ರಸ್ತುತ ಬಿಜೆಪಿ ಸರಕಾರ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗದ ಶಿಫಾರಸ್ಸಿನಂತೆ ಸರಕಾರ ಮೀಸಲಾತಿ ಹೆಚ್ಚಿಸುವ ತೀರ್ಮಾನ ಕೈಗೊಂಡಿದೆ ಎಂದರು. ಇಂತಹ ನಿರ್ಧಾರವನ್ನು ಕಾಂಗ್ರೆಸ್‍ನವರು ಸ್ವಾಗತ ಮಾಡುವುದನ್ನು ಬಿಟ್ಟು ಟೀಕೆ ಮಾಡುತ್ತಿದ್ದಾರೆ, ಕಾಂಗ್ರೆಸ್ ನಾಯಕರಿಗೆ ಬರೀ ಟೀಕೆ ಟಿಪ್ಪಣೆ ಮಾಡುವುದೇ ಒಂದು ಚಾಳಿಯಾಗಿ ಬಿಟ್ಟಿದೆ ಎಂದರು.

ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡುವ ಆದೇಶ ಹೊರಡಿಸಿದ್ದರಿಂದ ಆ ಸಮುದಾಯಗಳ ಬಹುದಿನಗಳ ಬೇಡಿಕೆ ಬಿಜೆಪಿ ಸರಕಾರ ಇಡೇರಿಸಿದೆ ಹಾಗೂ ಹಿಂದುಳಿದ ಈಡಿಗ ಸಮಾಜದ ಅಭಿವೃದ್ದಿಗೆ ಶ್ರೀ ನಾರಾಯಣಗುರು ಅಭಿವೃದ್ದಿ ಕೋಶ ಸ್ಥಾಪನೆ ಮಾಡಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ದಲಿತರ ಹಾಗೂ ಹಿಂದುಳಿದ ವರ್ಗದವರ ಅಭಿವೃದ್ದಿಗೆ ಅನೇಕ ಯೋಜನೆಗಳು ಹಾಗೂ ಸಾಕಾಷ್ಟು ಅನುದಾನ ಘೋಷಣೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ನೀಡಿದ ಏಕೈಕ್ ಸರಕಾರ ಅದು ಬಿಜೆಪಿ ಸರಕಾರವಾಗಿದೆ ಎಂದು ಹೇಳಿದರು.

ಕಲಬುರಗಿ ನಗರದಲ್ಲಿ ಇಚೇಗೆ ನಡೆದ ಬಿಜೆಪಿ ಹಿಂದುಳಿದ ವರ್ಗದವರ ಸಮಾವೇಶ ಅತ್ಯಂತ ಯಶಸ್ವಿಯಾಗಿದೆ ಈ ಕಾರ್ಯಕ್ರಮದಿಂದ ಬಿಜೆಪಿಗೆ ಭೂಸ್ಟ್ ಸಿಕ್ಕಂತಾಗಿದೆ. ಹಿಂದುಳಿದ ವರ್ಗದವರು ಬಿಜೆಪಿ ಜೊತೆ ಇದ್ದಾರೆ ಎನ್ನುವುದಕ್ಕೆ ಕಾರ್ಯಕ್ರಮಕ್ಕೆ ಬಂದಂತಹ ಲಕ್ಷಾಂತರ ಜನರೇ ಸಾಕ್ಷಿ ಎಂದು ಹೇಳಿದರು.

ಚಿತ್ತಾಪುರದಲ್ಲಿ ನಡೆಯಬೇಕಿದ್ದ ಜನ ಸಂಕಲ್ಪ ಯಾತ್ರೆ ಶಾಸಕ ಆನಂದ ಮಾಮನಿ ನಿಧನದಿಂದ ರದ್ದುಗೊಂಡಿತ್ತು. ಬರುವ ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಒಂದು ದಿನಾಂಕ ನಿಗದಿ ಮಾಡಲಿದ್ದಾರೆ. ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದ್ದು, ಎಲ್ಲೆಡೆ ಬಿಜೆಪಿ ವಾತಾವರಣವಿದೆ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ನಾನು ಸೇರಿದಂತೆ ಅನೇಕರು ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ ಆದರೆ ಪಕ್ಷ ಯಾರಿಗೆ ಅಭ್ಯರ್ಥಿಯನ್ನಾಗಿ ಮಾಡುತ್ತೋ ಅವರ ಪರವಾಗಿ ಹಾಗೂ ಪಕ್ಷ ತೆಗೆದುಕೊಂಡು ನಿರ್ಧಾರಕ್ಕೆ ಬದ್ದರಾಗಿ ಸೇವೆ ಸಲ್ಲಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕವಿತಾ ಚವ್ಹಾಣ, ಶಾಂತಕುಮಾರ ಮಳಖೇಡ, ಚಂದ್ರಶೇಖರ ಕಡೇಸೂರ, ಗಿರೀಶ ಬೊಮ್ಮನಳ್ಳಿ, ಮಾರುತಿ ಬೊಮ್ಮನಳ್ಳಿ ಇದ್ದರು