
ಮುದ್ದೇಬಿಹಾಳ: ಮೇ.17:ಈ ಹಿಂದಿನಿಂದಲೂ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯಾಗಬೇಕು ಎನ್ನುವ ಕೂಗು ಇದೆ. ಅದರಂತೆಯೇ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಾರಿ 135 ಸ್ಥಾನಗಳನ್ನುಪಡೆದು ಬಹುಮತವನ್ನು ಪಡೆದುಕೊಂಡಿದೆ , ಆದರಿಂದ ದಲಿತ ಮುಖ್ಯಮಂತ್ರಿ ಮಾಡಬೇಕು ಮತ್ತು ಸ್ಥಳೀಯ ಶಾಸಕರಾದ ಸಿ ಎಸ್ ನಾಡಗೌಡ ಅಪ್ಪಾಜಿಯವರು ಹಿರಿಯ ಸೌಮ್ಯ ರಾಜಕಾರಣಿಗಳು ಮತ್ತು ಇದು ನಾಡಗೌಡರ ಕೊನೆಯ ಚುನಾವಣೆ ಆಗಿದ್ದರಿಂದ ಈ ಬಾರಿ ಅವರಿಗೆ ಸಚಿವ ಸಂಪುಟದಲ್ಲಿ ಉನ್ನತವಾದ ಹುದ್ದೆಯನ್ನು ನೀಡಬೇಕು ಎಂದುತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳು ಒಕ್ಕೂರಲಿಂದ ಕಾಂಗ್ರೇಸ್ ಹೈಕಮಾಂಡ್ಗೆ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಹಾಗೂರಾಜ್ಯ ದಲಿತ ಸಂಘದ ಹಿರಿಯ ಮುಖಂಡ ಡಿ ಬಿ ಮುದೂರ ಅವರು ಮಾತನಾಡಿದ ಅವರು.
ಪ್ರತಿ ಬಾರಿ ಚುನಾವಣೆಯಲ್ಲಿ ದಲಿತ ಸಮೂದಾಯ ಕಾಂಗ್ರೇಸ್ ಪಕ್ಷಕ್ಕೆ ನಿಷ್ಠೆಯಿಂದ ಬೆಂಬಲಿಸುತ್ತಲೇ ಬಂದಿದೆ ಅದರಂತೆ ಪ್ರತಿ ಸಲ ಸರಕಾರದ ರಚನೆ ವೇಳೆ ದಲಿತ ಮುಖ್ಯಮಂತ್ರಿ ಕೂಗು ಕೇಳಿ ಬರುತ್ತಲೇ ಇರುತ್ತದೆ ಆದರೇ ಇಲ್ಲಿತನಕವೂ ಇಡೇರಿಲ್ಲ ಸಧ್ಯ ಈ ಬಾರಿ ಎಲ್ಲ ಅವಕಾಶಗಳು ಕೈಗೂಡಿ ಬಂದಿವೆ ಕಾರಣ ಈ ಬಾರಿಯಾದರೂ ದಲಿತ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಿಪ್ಪಣ್ಣ ದೊಡಮನಿ, ಸಿ ಜಿ ವಿಜಯಕರ, ಶ್ರೀಕಾಂತ್ ಚಲವಾದಿ, ಬಾಲೂ ಹುಲ್ಲೂರ, ದೇವರಾಜ ಹುನಕುಂಟಿ, ಪ್ರಶಾಂತ ಕಾಳೆ, ಶಂಕರ ಮುರಾಳ, ಲಕ್ಷ್ಮಣ ವಡ್ಡರ್, ದೀಲಿಪ್ ರಾಠೋಡ, ಬಸವರಾಜ ನಾಗರಬೆಟ್ಟ, ಹುಲಗೆಪ್ಪ ಮಾದರ, ಪರಸು ಕೂಚಬಾಳ ಇನ್ನೀತರರು ಇದ್ದರು.