
ಶಹಾಬಾದ: ಜ.20:ನಗರದ ಶಮ್ಸ್ ಸಭಾಂಗಣದಲ್ಲಿ ಜನವರಿ 22 ಬೆಳಿಗ್ಗೆ 10.30 ಗಂಟೆಗೆ ದಲಿತ ಸಾಹಿತ್ಯ ಪರಿಷತ್ ಶಹಾಬಾದ ತಾಲೂಕ ಘಟಕದ ಉದ್ಘಾಟನಾ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ತಾಲೂಕಿನ ತಹಶೀಲ್ದಾರರಾದ ಸುರೇಶ್ ವರ್ಮಾ ಉದ್ಘಾಟಿಸಲಿದ್ದಾರೆ.
ಕನ್ನಡ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹನುಮಂತರಾವ. ಬಿ. ದೊಡ್ಡಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ್, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಡಾ. ಶಾಂತಮಲ್ಲಪ್ಪ.ವಾಯ್. ಹೊನ್ನುಂಗರ, ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಸಹಕಾರದರ್ಶಿ ಡಾ. ಕೈಲಾಸ್ ಎಸ್. ಡೋಣಿ. ದಲಿತ ಚಳುವಳಿ ನಾಯಕ ಸುರೇಶ ಮೆಂಗನ, ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಘುವೀರಸಿಂಗ್ ಠಾಕೂರ್, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್ ಆಗಮಿಸಲಿದ್ದಾರೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಗಪ್ಪ ಬೆಳಮಗಿ (ಸಾಹಿತ್ಯ ಕ್ಷೇತ್ರ), ಡಾ. ಮಲ್ಲೇಶಿ ಸಜ್ಜನ್ (ಸಂಘಟನೆ ಕ್ಷೇತ್ರ), ರಮೇಶ್ ಭಟ್ (ಪತ್ರಿಕಾ ಕ್ಷೇತ್ರ), ಕು.ಯಶೋಧ.ಎ.ಮಸ್ಕಿ (ಸಂಗೀತ ಕ್ಷೇತ್ರ), ಡಾ.ಪಿಎಂ ಸಜ್ಜನ್ (ವೈದ್ಯಕೀಯ ಕ್ಷೇತ್ರ), ವರುಣ ಕುಮಾರ ಘಾಣದಾಳ (ಶಿಕ್ಷಣ ಕ್ಷೇತ್ರ), ಗುರುಪುತ್ರ ಕರಣಿಕ್ (ಕೃಷಿ ಕ್ಷೇತ್ರ), ಶಿವಯೋಗಿ ಮೇತ್ರೆ (ಕ್ರಾಂತಿ ಗೀತೆ) ಪ್ರಮೋದ.ಎ.ನಾಟಿಕರ್ (ನೃತ್ಯ) ಇವರನ್ನು ವಿಶೇಷ ಸನ್ಮಾನ ಮಾಡಲಾಗುತ್ತಿದೆ ಎಂದು ಕನ್ನಡ ದಲಿತ ಸಾಹಿತ್ಯ ಪರಿಷತ್ತಿನ ಪ್ರಧಾನಕಾರ್ಯದರ್ಶಿ ಅನೀಲಕುಮಾರ ಮೈನಾಳಕರ್ ತಿಳಿಸಿದ್ದಾರೆ.