ದಲಿತ ಸಾಹಿತ್ಯ ಎಲ್ಲರನ್ನು ಒಳಗೊಳ್ಳುವ ಗುಣ ಹೊಂದಿದೆ

ಕಲಬುರಗಿ:ಸೆ.17:ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕನ್ನಡ ಪ್ರಾಧ್ಯಾಪಕರಾದ ಡಾ. ಬಿ.ಎಂ. ಪುಟ್ಟಯ್ಯನವರು ಮಾತನಾಡುತ್ತಾ, ದಲಿತ ಬಂಡಾಯಕ್ಕೆ ಶಕ್ತಿಯನ್ನು ತುಂಬಿದವರು ಈ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಚನ್ನಣ್ಣ ವಾಲೀಕಾರ ಅವರು. 1974ರ ಸುಮಾರಿಗೆ ಕರ್ನಾಟಕದಲ್ಲಿ ದಲಿತ ಬಂಡಾಯ ಸಾಹಿತ್ಯ ರಚನೆಗೊಂಡಿತು. ಭಾರತ ದೇಶ ಸ್ವತಂತ್ರ್ಯ ಗೊಂಡು 27 ವರ್ಷಗಳು ಗತಿಸಿದ್ದರು ಕೂಡಾ ದಲಿತರ, ಮಹಿಳೆಯರ, ಕಾರ್ಮಿಕರ, ಬುಡಕಟ್ಟು ಜನ ಸಮುದಾಯಗಳು ವಿಮೋಚನೆಗೊಂಡಿರಲಿಲ್ಲ. ಅನ್ಯಾಯ, ಅಪಮಾನ, ಅತ್ಯಾಚಾರ, ದೌರ್ಜನ್ಯಗಳು ನಿರಂತರವಾಗಿ ದುಡಿಯುವ ವರ್ಗದ ಮೇಲೆ ನಡೆಯುತ್ತಿದ್ದವು. ಇಂತಹ ಅವ್ಯವಸ್ಥೆಯನ್ನು ಕಂಡುಂಡ ದಲಿತ ಸಮುದಾಯದ ಮೊದಲ ತಲೆಮಾರಿನ ಬರೆಹಗಾರರು ಲೆಕ್ಕಣಿಕೆಯನ್ನು ಕೈಗೆ ಎತ್ತಿಕೊಂಡು ಸಾಹಿತ್ಯಾತ್ಮಕವಾಗಿ ತೊಡಗಿಸಿಕೊಂಡರು. ಆರಂಭದಲ್ಲಿ ಸಾಹಿತ್ಯ ರಚನೆಗೊಂಡದ್ದು ಪೆÇೀಲಿಸ್ ಠಾಣೆಯಲ್ಲಿ ಬರೆದ ಪೋಲಿಸ್ ಕಾಂಪ್ಲೆಂಟ್ ಮೂಲಕ ಎಂಬುದು ಮಹತ್ವದು. ನಂತರ ದೇವನೂರ ಅವರ ದ್ಯಾವನೂರು ಎಂಬ ಪ್ರಥಮ ಸಾಹಿತ್ಯಿಕ ಕಥಾಸಂಕಲನ ಇವು ಬರಹಕ್ಕೆ ತೊಡಗಿಸಿಕೊಳ್ಳಲು ಸ್ವಾಭಿಮಾನವನ್ನು ಮೂಡಿಸಿದವು. ದಲಿತ ಅಕ್ಷರದಲ್ಲಿ ಚಾರಿತ್ರಿಕ ಶಕ್ತಿಯಿದೆ ಎಂಬುದನ್ನು ಬಿಂಬಿಸಿದವು. 70ರ ದಶಕದಲ್ಲಿ ದಲಿತರ ಕಷ್ಟ, ನೋವು, ಅನ್ಯಾಯ, ಅಪಮಾನ, ಅಸಮಾನತೆ, ದೌರ್ಜನ್ಯದ ವಿರುದ್ಧ ಧ್ವನಿಯೆತ್ತಿ ಪ್ರತಿಭಟಿಸಿದ್ದು ಅಂದರೆ ದಲಿತ ಬಂಡಾಯ ಸಾಹಿತಿಗಳು. ಆ ಸಂದರ್ಭಲ್ಲಿ ಮೇಲ್ವರ್ಗದವರು ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯನ್ನು ನಿರಂತರವಾಗಿ ಎಸಗುತ್ತಿದ್ದರು. ಕರ್ನಾಟಕದ ಕೋಲಾರದ ಒಂದು ಪ್ರಕರಣದಲ್ಲಿ ಅನುಸೂಯಮ್ಮಳ ಮೇಲೆ ನಡೆದ ಅತ್ಯಾಚಾರ, ಅನ್ಯಾಯ ನಡೆದಾಗ ಮುಂಚೂಣಿಯಾಗಿ ನಿಂತು ಹೋರಾಡಿದವರು ದಲಿತ ಸಂಘಟನೆಯವರು ಮತ್ತು ದಲಿತ ಸಾಹಿತ್ಯಗಳು ಎಂಬುದು ಸ್ಮರಿಸಬೇಕು. ದಲಿತ ಕಾವ್ಯ ಅಂತರಾಳದ ಭಾವನೆಗಳನ್ನು ನಿರೂಪಿಸುವಂತದ್ದಾಗಿದೆ. ಸಾಮಾಜಿಕ ಅನ್ಯಾಯ ವಿರುದ್ದ ಹಕ್ಕೊತ್ತಾಯದ ಬೀಜವಾಗಿ ಪ್ರತಿಭಟನೆಗಳು ನಡೆದವು.

ನಂತರ ಡಾ. ಸಿದ್ದಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ ಕವನ ಸಂಕಲನದ ಸಾಹಿತ್ಯವನ್ನು ಮೇಲ್ವರ್ಗದ ಸಾಹಿತಿಗಳು ಸಾಹಿತ್ಯವಲ್ಲವೆಂದು ವಿಮರ್ಶಿಸಿದರು. ಇಂತಹ ವಿಷಮ ಮನಸ್ಥಿತಿಯ ವಿಮರ್ಶಕರನ್ನು ಕಾಣುತ್ತೇವೆ. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಯಜಮಾನಿಕೆಯನ್ನು ಎತ್ತಿಹಿಡಿಯಿತು. ಹೀಗಾಗಿ ಸಿದ್ಧಲಿಂಗಯ್ಯನವರ ಸಾಹಿತ್ಯ ಸಾಹಿತ್ಯವೆನಿಸಲಿಲ್ಲ ಅವರಿಗೆ. ಹೊಲೆಮಾದಿರ ಹಾಡು ಒಂಟಿ ಸಾಹಿತ್ಯವಾಗಿ ನಿಲ್ಲಲಿಲ್ಲ, ಸಮಾಜದಲ್ಲಿನ ನೂರಾರು ಜನರು ಸಾಮಾಜಿಕ ವಿಮರ್ಶೆಗೆ ಒಳಪಡಿಸಿದರು. ದಲಿತ ಸಂಘಟನೆ ಮತ್ತು ಸಾಹಿತ್ಯಕ್ಕೆ ಪೆÇ್ರ. ಬಿ. ಕೃಷ್ಣಪ್ಪನವರ ಕೊಡುಗೆ ಅವಿಸ್ಮರಣೀಯ. ಆಗ ‘ಪಂಚಮ’ ಪತ್ರಿಕೆ ದಲಿತ ಸಾಹಿತ್ಯದ ಮುಖ್ಯ ವಾಹಿನಿಯಾಗಿ ಕಾರ್ಯನಿರ್ವಹಿಸಿದೆ. ಸಾಮಾಜಿಕ ಬದಲಾವಣೆ, ಸಾಂಸ್ಕøತಿಕ ಬದಲಾವಣೆಗಾಗಿ ಸಾಹಿತ್ಯ ರಚನೆಗೊಂಡಿತು.

ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಎಂಬ ಶೀರ್ಷಿಕೆಯಲ್ಲಿ ಕೃತಿಯನ್ನು ಹೊರತಂದುದ್ದು ದುರಂತದ ಸಂಗತಿ. ದಲಿತ ಸಾಹಿತ್ಯ ರಚನೆಗೊಂಡದ್ದು ಬಂಡಾಯ ಸಂಘಟನೆಗಿಂತ ಮುಂಚೆ, ಆದರೆ ಒಬ್ಬ ಬರೆಹಗಾರ ತಪ್ಪಾಗಿ ದಾಖಲಿಸಿದ್ದು ಯಾರೂ ಪ್ರಶ್ನಿಸುವ ಗೋಜಿಗೆ ಹೋಗಿಲ್ಲ ಎಂಬುದು ಸೋಜಿಗದ ಸಂಗತಿ. ಆ ಸಂದರ್ಭದಲ್ಲಿ ಅಂತರ್ ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಿದರು. ಜೊತೆಗೆ ಇಪ್ಪತ್ತೈದು ಸಾವಿರ ರೂಪಾಯಿಗಳು ಪ್ರೋತ್ಸಾಹ ಧನ ನೀಡಲಾಯಿತು. ಆಗ ದಲಿತೇತರ ಬರೆಹಗಾರರಿಗೆ ದಲಿತ ಸಾಹಿತ್ಯ ಬರೆಹಗಾರರು ವೇದಿಕೆಗೆ ಆಹ್ವಾನ ನೀಡಿ ಪ್ರಗತಿಪರ ಬರೆಹಗಾರರೆಂದು ಹೆಸರಿಸಿತ್ತು.

ಕೋಲಾರದಲ್ಲಿ ನಡೆದ ಒಂದು ಸಮಾವೇಶದಲ್ಲಿ ಸಿದ್ಧಲಿಂಗಯ್ಯನವರು ವೇದಿಕೆಯಲ್ಲಿರುವ ಬಿ. ಬಸವಲಿಂಗಪ್ಪನವರಿಗೆ ಭಾಷಣದಲ್ಲಿ ಹಕ್ಕೊತ್ತಾಯಗಳನ್ನು ಮಾಡಿದರು. ಅದು ಮುಂದೆ ಕಾಯ್ದೆ ಕಾನೂನಾಗಿ ಮಾರ್ಪಟ್ಟಿದ್ದು ಗಮನಾರ್ಹ. ಇದೆ ಸಂದರ್ಭದಲ್ಲಿ ಮಲಹೊರುವ ಪದ್ಧತಿಯನ್ನು ನಿಷೇಧಿಸಿದ್ದು ಕಾಣಬಹುದು. ದಲಿತ ಸಾಹಿತ್ಯದ ಆಶಯ ವಿಶಾಲವಾದದ್ದು. ಇದಕ್ಕೆಲ್ಲ ಪ್ರೇರಣೆಯಾದದ್ದು ಡಾ. ಅಂಬೇಡ್ಕರ್, ಕಾರ್ಲ್‍ಮಾಕ್ರ್ಸ್ ಅವರ ಚಿಂತನೆಗಳು, ಬರೆಹಗಳು ಎಂದು ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರೊ. ಎಚ್.ಟಿ. ಪೋತೆಯವರು ಮಾತನಾಡುತ್ತಾ ಅಪಮಾನಿತ ಜಾತಿಗಳ ಜನರ ಪ್ರತಿನಿಧಿಗಳಾದವರು ಬುದ್ಧ, ಬಸವ, ಅಂಬೇಡ್ಕರ್ ಮತ್ತು ಶ್ಯಾಮಸುಂದರ್ ಎಂಬುದು ವಿಶೇಷ. ದಲಿತ ಎನ್ನುವುದು ಸಮಾಜದ ಎಲ್ಲಾ ಸಂಸ್ಕøತಿಯನ್ನು ಒಳಗೊಂಡದ್ದು, ಕೇವಲ ಒಂದು ಸಮುದಾಯದ ಏಳ್ಗೆಗಾಗಿ ಹುಟ್ಟಿಕೊಂಡದ್ದಲ್ಲ. ನೂರಾರು ಸಮಸ್ಯೆ ಸವಾಲುಗಳಿಗೆ ಸಾಮಾಜಿಕ ನ್ಯಾಯ ಒಡಮೂಡಿಸುತ್ತದೆ ದಲಿತ ಸಾಹಿತ್ಯ. ಅನ್ಯಾಯ, ಅಪಮಾನ, ದೌರ್ಜನ್ಯ, ಅಸಮಾನತೆಗೆ ಒಳಗಾದವರಿಗೆ ನೆಲೆಯನ್ನು ಕಲ್ಪಿಸಿಕೊಟ್ಟದ್ದು ದಲಿತ ಸಾಹಿತ್ಯ ಮತ್ತು ಸಂಘಟನೆಗಳು ಎಂಬ ಕಿವಿ ಮಾತನ್ನು ಹೇಳಿದರು. ದಲಿತ ಎನ್ನುವುದು ಒಂದು ಪ್ರಜ್ಞೆ, ಎಲ್ಲರ ನೋವಿಗೆ ಸ್ಪಂಧಿಸುವ ಜಾಗೃತಿಯ ಬೆಳಕು ದಲಿತ ಸಾಹಿತ್ಯ ಅದೊಂದು ಒಳಗೊಳ್ಳುವ ಪ್ರಧಾನ ಧಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿ, ವಂದಿಸಿದರು.