ದಲಿತ ಸಮೂಹದಿಂದ ಬಾಬು ಜಗಜೀವನ್ ರಾಂ ಜಯಂತಿ ಆಚರಣೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.06: ದಲಿತ ಸಮೂಹದ  ಮುಖಂಡರು ಇಂದು  ಹಸಿರು ಕ್ರಾಂತಿಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ನವ ಭಾರತದ ನಿರ್ಮಾಪಕ ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ 116ನೇ ಜಯಂತೋತ್ಸವವನ್ನು. ನಗರದ ನಲ್ಲಚರುವಿನ  ಬಾಬು ಜಗಜೀವನ್ ರಾಮ್ ಭವನದ ಆವರಣದಲ್ಲಿರುವ  ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಸರಳವಾಗಿ ಆಚರಿಸಲಾಯಿತು
ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಕೆ.ಅನಂತಕುಮಾರ್, ಎ.ಮಾನಯ್ಯ, ಮುಂಡ್ರಿಗಿ ನಾಗರಾಜ್, ಹೆಚ್.ಸಿದ್ದೇಶ, ಸಿ.ಸೋಮಶೇಖರ್ ಚೇಳ್ಳಗುರ್ಕಿ, ಮಲ್ಲಯ್ಯ ಕೊಳಗಲ್ಲು,  ಟಿ.ಎಂ.ಯರಿಸ್ವಾಮಿ, ಹೆಚ್.ಆಂಜನೇಯ, ಹೆಚ್.ಮಲ್ಲಪ್ಪ, ಹೆಚ್.ಶಂಕರ್, ರಂಗಪ್ಪ, ಹನುಂಮತ ವೈ ಬುದಿಹಾಳ್, ಮಹೇಶ್ ಭತ್ರಿ, ದುರ್ಗದಾಸ್ ಮೊದಲಾದವರು ಇದ್ದರು.