
ಕೋಲಾರ,ಮೇ,೪:ದಲಿತ ಸಮುದಾಯವನ್ನು ಅವಮಾನಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್‌ರನ್ನು ಯಾವುದೇ ಕಾರಣಕ್ಕೂ ಎಂಎಲ್‌ಎ ಆಗದ ರೀತಿಯಲ್ಲಿ ದಲಿತರು ಎಚ್ಚರಿಕೆ ವಹಿಸಬೇಕು, ಆ ನಿಟ್ಟಿನಲ್ಲಿ ದಲಿತರ ನಡಿಗೆ ಜೆಡಿಎಸ್ ಕಡೆಗೆ ಎಂಬ ಸಂದೇಶ ಸಾರುವ ಮೂಲಕ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್‌ರನ್ನು ಬೆಂಬಲಿಸಲು ದಲಿತ ಸಂಘಟನೆಗಳು ನಿರ್ಧರಿಸಲಾಗಿದೆ ಎಂದು ಕದಸಂಸ ಸಂಯೋಜಕ ರಾಜ್ಯ ಅಧ್ಯಕ್ಷ ಡಾ.ಆರ್ ಅಶ್ವಥ್ ನಾರಾಯಣ ಅಂತ್ಯಜ ತಿಳಿಸಿದರು
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ದಲಿತರಿಗೆ ಸಿಗಬೇಕಾದ ರಾಜಕೀಯ ಹಕ್ಕನ್ನು ಕಸಿದುಕೊಂಡು ಮುಳಬಾಗಿಲು ಕ್ಷೇತ್ರದಲ್ಲಿ ಶಾಸಕರಾಗಿದ್ದು ಅಲ್ಲದೇ ಸಾಮಾನ್ಯ ಕ್ಷೇತ್ರದಲ್ಲಿ ಇವತ್ತು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಸಿಗಬೇಕಾದ ಸ್ಥಾನಮಾನ ಕಸಿದುಕೊಳ್ಳಲು ಬಂಂದಿದ್ದಾರೆ ಅಂತಹವರಿಗೆ ದಲಿತ ಸಮುದಾಯವು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕಾದರೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿಎಂಆರ್ ಶ್ರೀನಾಥ್‌ರನ್ನು ಬೆಂಬಲಿಸಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಹಿಂದೂಗಳು ಮುಸ್ಲಿಮರು ಅಣ್ಣ ತಮ್ಮಂದಿರ ರೀತಿಯಲ್ಲಿ ಬದುಕುತ್ತಾ ಇದ್ದರು ಕೆ.ಎಚ್.ಮುನಿಯಪ್ಪ ಸುಮಾರು ಏಳು ಬಾರಿ ಸಂಸದರಾದರೂ ಕೂಡ ಯಾವತ್ತೂ ಜಾತಿ ಧರ್ಮಗಳ ಮಧ್ಯೆ ಗಲಾಟೆ ಮಾಡಲಿಲ್ಲ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಕೂಡ ನೇರವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವ ಮೂಲಕ ಕೋಮುವಾದಿ ಬಿಜೆಪಿ ಬೆಂಬಲಿಸದವರಿಗೆ ಇವತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಡಿದ್ದಾರೆ, ದಲಿತರ ಸ್ವಾಭಿಮಾನ ಉಳಿಯಲು ಕೊತ್ತೂರು ಮಂಜುನಾಥ್‌ರನ್ನು ಈ ಚುನಾವಣೆಯಲ್ಲಿ ಸೋಲಿಸಬೇಕಾಗಿದೆ ಎಂದರು.
ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಖಾಸಗೀಕರಣ, ಜಾಗತೀಕರಣ, ಉದಾರೀಕರಣ ಬೆಲೆ ಏರಿಕೆಯಲ್ಲಿ ಮುಳಗಿದ್ದಾರೆ ಜೊತೆಗೆ ದಲಿತರನ್ನು ಕೇವಲ ಓಟು ಬ್ಯಾಂಕ್ ಮಾಡಿಕೊಂಡು ದಲಿತರನ್ನು ಅಧಿಕಾರದಿಂದ ದೂರ ಇಟ್ಟಿದ್ದಾರೆ, ಜೆಡಿಎಸ್ ಪಕ್ಷವು ದಲಿತ ಸಂಘಟನೆಗಳ ಪ್ರಮುಖ ನಾಯಕರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡಲಾಗಿದ್ದು ಅಲ್ಲದೇ ಸಚಿವರು ಶಾಸಕರಾಗಿ ಆಯ್ಕೆ ಮಾಡಲಾಗಿದ್ದು ಈ ಬಾರಿ ಚುನಾವಣೆಯಲ್ಲಿ ರಾಜ್ಯಾದ್ಯಂತ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದೆ ಎಂದರು.
ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಹಾರೋಹಳ್ಳಿ ಆರ್.ವೇಣು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಇದ್ದರೂ ಕೂಡ ಕೋಲಾರ ಕ್ಷೇತ್ರಕ್ಕೆ ಅರ್ಜಿ ಹಾಕದೇ ಇರುವ ದಲಿತ ವಿರೋಧಿ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ ಕೊತ್ತೂರು ಮಂಜುನಾಥ್ ಅಧಿಕಾರದ ದರ್ಪದಿಂದ ಬಾಯಿಗೆ ಬಂದಂತೆ ಮಾತಾಡುತ್ತಾರೆ ಜೆಡಿಎಸ್ ಅಭ್ಯರ್ಥಿ ದಲಿತರ ಬಗ್ಗೆ ಕಾಳಜಿ, ಅಂಬೇಡ್ಕರ್ ಸಿದ್ದಾಂತ ಹಾಗೂ ಅಶಯಗಳೊಂದಿಗಿರುವ ಸಿಎಂಆರ್ ಶ್ರೀನಾಥ್‌ರನ್ನು ಬೆಂಬಲಿಸಲು ನಮ್ಮ ಸಂಘಟನೆ ನಿರ್ಧರಿಸಲಾಗಿದೆ ಎಂದರು
ಮುಖಂಡರಾದ ಬೆಗ್ಲಿ ರಾಮಚಂದ್ರ, ಗಂಗಮ್ಮನಪಾಳ್ಯ ಶಿವು, ರೋಜಾ, ಮನೋಜ್, ಶ್ರೀನಿವಾಸ್ ಇದ್ದರು.