ದಲಿತ ಸಮುದಾಯಕ್ಕೆ ಅಪಮಾನ; ಖಂಡನೆ

ದಾವಣಗೆರೆ.ಏ.೧೬: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್
 ಶಾಸಕರಾದ ಸುಜಾತ ಮಂಡಲ್  ಪರಿಶಿಷ್ಟ ಜಾತಿಗಳನ್ನು ಕುರಿತು ಅಪಮಾನಕರ ಹೇಳಿಕೆ ನೀಡಿರುವುದು ಖಂಡನೀಯ.ಈ ಕೂಡಲೇ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಜಿಲ್ಲಾ ಬಿಜೆಪಿ ಎಸ್ .ಸಿ ಮೋರ್ಚಾ ಅಧ್ಯಕ್ಷ  ಎನ್.ಹನುಮಂತ ನಾಯ್ಕ್ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು 
ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಶ್ರೀಮತಿ ಸುಜಾತ ಮಂಡಲ್  ಎಂಬುವರು ಪರಿಶಿಷ್ಟ ಜಾತಿಯವರ ಬಗ್ಗೆ  ಅಪಮಾನಕರವಾದ ಹೇಳಿಕೆ ನೀಡಿದ್ದಾರೆ .  ಮಮತಾ ಬ್ಯಾನರ್ಜಿಯವರು ಪರಿಶಿಷ್ಟ ಜಾತಿಯವರ ಅವಶ್ಯಕತೆಯನ್ನು ಪೂರೈಸಿದ್ದರು ಅವರ ಬೇಡಿಕೆಗಳನ್ನು ಕಡಿಮೆ ಮಾಡಿಲ್ಲ , ಹಾಗಾಗಿ ಕೆಲವರು ನೈಜವಾಗಿ ಭಿಕ್ಷುಕರಾಗಿದ್ದರೆ ಇನ್ನೂ ಕೆಲವರನ್ನು ಸಂದರ್ಭಗಳು ಭಿಕ್ಷುಕರನ್ನಾಗಿ ಮಾಡಿರುತ್ತದೆ . ಆದರೇ ಇಲ್ಲಿ ಪರಿಶಿಷ್ಟ ಜಾತಿಯವರು ನೈಜವಾಗಿಯೇ ಬೇಡುವ ಭಿಕ್ಷಕರು ಎಂಬ ಹೇಳಿಕೆಯನ್ನು ನೀಡುವ ಮೂಲಕ ಪರಿಶಿಷ್ಟ ಜಾತಿಯ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ಅವಮಾನಿಸಿದ್ದಾರೆ . ಬಿಆರ್ . ಅಂಬೇಡ್ಕರ್‌ರವರ ೧೩ ನೇ ಜನ್ಮದಿನವನ್ನು ಸಂಭ್ರಮವಾಗಿ ಆಚರಿಸುವ ಈ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಯಕಿ ಶ್ರೀಮತಿ ಸುಜಾತ ಮಂಡಲ್ ರ ದುಷ್ಟ ಮುತ್ತು ಕೀಳು ಮನಸ್ಥಿತಿಯನ್ನು ತೋರುತ್ತದೆ . ಡಾ. ಬಿ . ಆರ್ . ಅಂಬೇಡ್ಕರ್‌ರವರ ಪ್ರಚಲಪ್ರಭುತ್ವದ ಸಿದ್ದಾಂತದ ಆಧಾರದಲ್ಲಿ ರಚಿಸಲಾದ ಸಂವಿಧಾನದ ಆಶಯದಡಿಯಲ್ಲಿ ಪ್ರಜೆಗಳ ಮತಭಿಕ್ಷೆಯಿಂದ ಗೆದ್ದು ಜನಪ್ರತಿನಿಧಿಗಳಾಗುವ ಇವರ ಹೀನ ದುಸ್ಥಿತಿ ಖಂಡನೀಯ.
ಶತ ಶತಮಾನಗಳಿಂದಲೂ ತಮ್ಮ ಬೆವರಿಗೆ ತಕ್ಕ ಬೆಲೆ ಇಲ್ಲದಿದ್ದರೂ ದುಡಿಯುತ್ತಲೇ ತಮ್ಮ ಬದುಕನ್ನು ಸಾಗಿಸುತ್ತಿರುವ ಪ್ರತಿಯೊಬ್ಬ ಪರಿಶಿಷ್ಟ ಜಾತಿಯವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ.ಆದ್ದರಿಂದ ಈ ಕೂಡಲೇ ಸುಜಾ ಮಂಡಲ್  ಖಾನ್ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು.ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಜಿ.ವಿ ಗಂಗಾಧರ್,ಅಂಜಿನಪ್ಪ,ಜಯಣ್ಣ,ಹನುಮಂತಪ್ಪ, ನಾಗರಾಜ್ ನಾಯ್ಕ್,ಮಂಜಾನಾಯ್ಕ್ ಇತರರಿದ್ದರು.