ದಲಿತ ಸಂಘರ್ಷ ಸಮಿತಿ ಹೆಸರು ದುರ್ಬಳಕೆ ಮಾಡಿದರೆ ದೂರು

ದಾವಣಗೆರೆ.ಏ.೨೩; ದಲಿತ ಸಂಘರ್ಷ ಸಮಿತಿ ಪುನಶ್ಚೇತನ ಮಾಡಬೇಕಾಗಿದ್ದು, ಇನ್ನು ಮುಂದೆ ಈ ಹೆಸರಿನಲ್ಲಿ ಬೇರೆ ಯಾವುದೇ ಸಂಘಟನೆಗಳು ಲೆಟರ್ ಹೆಡ್ ಉಪಯೋಗಿಸುವಂತಿಲ್ಲ. ಒಂದು ವೇಳೆ ಸಮಿತಿ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ದೂರು ನೀಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರುದಲಿತರ , ಶೋಷಿತರ , ಏಳಿಗೆಗಾಗಿ 1978ರಲ್ಲಿ ಗಿರಿಯಪ್ಪ ಮತ್ತು ಪ್ರೊಫೆಸರ್ ಕೃಷ್ಣಪ್ಪ ಇವರ ನೇತೃತ್ವದಲ್ಲಿ , ಭದ್ರಾವತಿಯ ಹರಿಜನ ಕಾಲೋನಿಯಲ್ಲಿ , ದಲಿತ ಸಂಘರ್ಷ ಸಮಿತಿ ಸ್ಥಾಪಿಸಲಾಯಿತು . ನಂತರ  ಸಂಸ್ಥೆ ಯಶಸ್ವಿಯಾಗಿ ಮುಂದುವರೆದುಕೊಂಡು ಬಂದು ದಲಿತರ ಏಳಿಗೆಗಾಗಿ ಕಾರ್ಯ ನಿರ್ವಹಿಸಿತು . 2009 ರ ವೇಳೆಯಲ್ಲಿ ಎನ್ , ಗಿರಿಯಪ್ಪ ಮತ್ತು ಎಂ . ಗುರುಮೂರ್ತಿ ಇವರುಗಳ ನೇತೃತ್ವದಲ್ಲಿ ಈ ಸಂಸ್ಥೆಯು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂದು ಕಾರ್ಯ ಕ್ಷೇತ್ರವನ್ನು ಇಡೀ ರಾಜ್ಯಕ್ಕೆ ವ್ಯಾಪಿಸಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಾಗುತ್ತಿತ್ತು.ಪರಿಸ್ಥಿತಿ ಹೀಗಿದ್ದರೂ ಈ ಪ್ರಕರಣದ ಎದುರುದಾರರು , 5 ನೇ ಪ್ರತಿವಾದಿ , ಭದ್ರಾವತಿ ಸತ್ಯ 2008ರಂದು ಸಹಕಾರ ಸಂಘಗಳ ಉಪನಿಬಂಧಕರು , ಶಿವಮೊಗ್ಗ ಇವರಿಗೆ ತಾವೇ ನಿಜವಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಂದು ವಾದಿಗಳು ಅಲ್ಲವೆಂದು ತಮ್ಮದೇ ಆದ ಪದಾಧಿಕಾರಿಗಳ ಪಟ್ಟಿಯನ್ನು , ವಾರ್ಷಿಕ ಲೆಕ್ಕ ವರದಿಯನ್ನು ಸಲ್ಲಿಸಿ ಅದನ್ನು ಅನುಮೋದಿಸುವಂತೆ ಕೇಳಿಕೊಂಡಿದ್ದರು ಎಂದು ಮಾಹಿತಿ ನೀಡಿದರು.ಈ ಹಿನ್ನೆಲೆಯಲ್ಲಿ ರಾಜ್ಯ ಸಂಚಾಲಕನಾದ ನಾನು  ಸತ್ಯ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದರಿಂದ ಶಿವಮೊಗ್ಗ ಜಿಲ್ಲೆಯ ಸಹಕಾರ ಇಲಾಖೆಯ ಉಪನಿಬಂಧಕರು  ಈ ಪ್ರಕರಣವನ್ನು ಶಿವಮೊಗ್ಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ತೀರ್ಮಾನಿಸಲು ಆರ್ದಶಿಸಿದರು. ಅಲ್ಲದೇ ನ್ಯಾಯಾಲಯದಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಆದೇಶವನ್ನು ಮಾಡಿದರು. ಕಾರಣ ವಾದಿಗಳಾದ ನಾವು ಭದ್ರಾವತಿ ಹಿರಿಯ ವಿಭಾಗದ ಸಿವಿಲ್ ನ್ಯಾಯಾಲಯದಲ್ಲಿ 2012ರಲ್ಲಿ ವೆಂಕಟಗಿರಿಯಯ್ಯ ಮತ್ತು 10 ಜನ ಇತರರ ವಿರುದ್ಧ ದಾವೆ ಹೂಡಲಾಯಿತು. ನ್ಯಾಯಾಲಯ 4 ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಕಿರಿಯ ವಿಭಾಗದ ನ್ಯಾಯಾಧೀಶರು ವಾಡದಿ, ಪ್ರತಿಪಾದಿಗಳ ವಿಚಾರಣೆ ನಡೆಸಿ , ವಾದ , ವಿವಾದಗಳನ್ನು ಆಲಿಸಿ ಸಂಘಟನೆಯು 2 ರಿಂದ 9 ರವರೆಗೆ ಇರುವ ವಾದಿಗಳೇ ನೈಜ ಸಮಿತಿ ಎಂದೂ, ಅಲ್ಲದೆ ಸಮಿತಿಯ ಚಟುವಟಿಕೆಗಳನ್ನು ನಡೆಸಲು ಅವರೇ ಅಧಿಕಾರವುಳ್ಳವರೆಂದು ಮಾರ್ಚ್‌ 24, 2021ರಂದು ಘೋಷಿಸಿದೆ. ಅಲ್ಲದೇಪ್ರತಿವಾದಿಗಳು ಹೊರಡಿಸಿರುವ ರೆಸಲ್ಯೂಷನ್ , ಅವರುಗಳು ಸಲ್ಲಿಸಿರುವ ಪದಾಧಿಕಾರಿಗಳ ಪಟ್ಟಿ ಮತ್ತು ವಾರ್ಷಿಕ ಲೆಕ್ಕ ಪತ್ರ ಕಾನೂನುಬಾಹಿರ ಮತ್ತು ಅನಧಿಕೃತವೆಂದು ಘೋಷಿಸಿದೆ.  ಸಾಮಾನ್ಯ ಸಭೆ ನಡೆಸಲು ಪ್ರತಿವಾದಿಗಳು ಯಾವುದೇ ಅಧಿಕಾರವನ್ನು ಹೊಂದಿರಲಿಲ್ಲವೆಂದು ಮತ್ತು ಪ್ರತಿವಾದಿಗಳು ವಾದಿ ಸಂಸ್ಥೆಯ ನೋಂದಣಿಯ ಸಂಖ್ಯೆಯನ್ನು ಮತ್ತು ವಾದಿ ಸಂಸ್ಥೆಯ ಹೆಸರನ್ನು ಬಳಸದಂತೆ ಪ್ರತಿವಾದಿಗಳ ವಿರುದ್ಧ ಶಾಶ್ವತ ಪ್ರತಿಬಂಧಕಾಜ್ಞೆಯನ್ನು ನೀಡಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಕಿ  ಪ್ರೋ.ಜಿ.ವಿ.ಚಂದ್ರಣ್ಞ, ವಿಜಯಮ್ಮ, ಮಂಜುನಾಥ್ ಕುಂದವಾಡ, ಪರಮೇಶ್, ಮಹಾಂತೇಶ್ ಇತರರು ಇದ್ದರು.