ದಲಿತ ಸಂಘರ್ಷ ಸಮಿತಿಯಿಂದ ಬೆಂಗಳೂರ ಚಲೋಐಕ್ಯತಾ ಸಮಾವೇಶಕ್ಕೆ ಅಫಜಲಪುರದಿಂದ 2 ಸಾವಿರ ಜನ

ಅಫಜಲಪುರ:ನ.17: ಮುಂದಿನ ತಿಂಗಳು ಡಿ.6 ರಂದು ಬೆಂಗಳೂರಿನಲ್ಲಿ ನಡೆಯುವ ನಡೆಯುವ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕøತಿಕ ಪ್ರತಿರೋದ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶಕ್ಕೆ ಅಫಜಲಪುರದಿಂದ 2 ಸಾವಿರ ಜನ ಭಾಗಿಯಾಗಲಿದ್ದಾರೆ ಎಂದು ದಸಂಸ ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮನ್ನಾಳುವ ಸರ್ಕಾರಗಳು ದಲಿತರ ಹಕ್ಕುಗಳನ್ನು ಕಸಿಯುತ್ತಿವೆ. ಎಲ್ಲಾ ರಂಗದಲ್ಲೂ ದಲಿತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಇದನ್ನು ವಿರೋಧಿಸಿ ಮತ್ತು ದಲಿತ ಸಂಘಟನೆಗಳನ್ನೆಲ್ಲ ಒಗ್ಗೂಡಿಸಿ ದಲಿತ ಚಳುವಳಿಗೆ ಹೊಸ ಚೈತನ್ಯ ತಂದು ಕೊಡುವ ನಿಟ್ಟಿನಲ್ಲಿ ಡಿ.6 ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಸುಮಾರು 10 ಲಕ್ಷ ಜನ ಭಾಗಿಯಾಗಲಿದ್ದಾರೆ ಎಂದರು.
ದಸಂಸ ತಾಲೂಕು ಸಂಚಾಲಕರಾದ ಮಹಾಲಿಂಗ ಅಂಗಡಿ,ರಾಜು ಆರೇಕರ ಮಾತನಾಡಿ ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ದಲಿತರಿದ್ದೇವೆ. ಆದರೂ ರಾಜಕೀಯ, ಆರ್ಥಿಕ, ಸಾಮಾಜಿಕ ಪ್ರಾತಿನಿಧ್ಯಗಳಿಂದ ವಂಚಿತರಾಗುತ್ತಿದ್ದೇವೆ. ಹೀಗಾಗಿ ನಮ್ಮ ದಲಿತ ಸಂಘಟನೆಗಳನ್ನೆಲ್ಲ ಒಗ್ಗೂಡಿ ಐಕ್ಯತಾ ಸಮಾವೇಶ ಮಾಡುವ ಮೂಲಕ 80 ರ ದಶಕದ ದಲಿತ ಹೋರಾಟವನ್ನು ಮರುಕಳಿಸುವ ಕೆಲಸ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂಜು ಕೋಳಿಗೇರಿ, ಶಾಮ ಅಳ್ಳಗಿ, ಶರಣು ಹೊಸಮನಿ, ಗೌತಮ ಹಳ್ಯಾಳ ಖಾಜಪ್ಪ ಸೊನ್ನ ಇದ್ದರು.