
ಕೋಲಾರ, ಮಾ,೨೭-ಜೆ.ಡಿ.ಎಸ್. ಪಕ್ಷವು ರೈತರ, ಕಾರ್ಮಿಕರ, ದೀನದಲಿತ ಪಕ್ಷವಾಗಿದೆ. ಅಖಂಡ ಕೋಲಾರ ಜಿಲ್ಲೆಯು ಸಿ.ಬೈರೇಗೌಡ, ಶ್ರೀನಿವಾಸಯ್ಯ ಅವರ ಕಾಲದಲ್ಲಿ ಜನತಾದಳದ ಭದ್ರಕೋಟೆಯಾಗಿತ್ತು ಅದೇ ರೀತಿ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ೬ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲವು ಸಾಧಿಸುವ ಮೂಲಕ ಕುಮಾರಸ್ವಾಮಿ ಅವರನ್ನು ಮುಖ್ಯ ಮಂತ್ರಿ ಮಾಡುವುದು ನಮ್ಮೆಲ್ಲಾರ ಸಂಕಲ್ಪವಾಗ ಬೇಕಾಗಿದೆ ಎಂದು ಕೋಲಾರ ವಿಧಾನ ಸಭಾ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್ ತಿಳಿಸಿದರು
ನಗರದ ಬೈರೇಗೌಡ ನಗರದ ಮೈದಾನದಲ್ಲಿ ಜಿಲ್ಲಾ ಪ್ರಜ್ಞಾವಂತ ದಲಿತ ಸಂಘಟನೆ ಒಕ್ಕೂಟಗಳು ಆಯೋಜಿಸಿದ್ದ ಜೆ.ಡಿ.ಎಸ್‌ಗೆ ಬೆಂಬಲ ಸೂಚಿಸಿ ಆಯೋಜಿಸಿದ್ದ ದಲಿತ ಸಮಾವೇಶದಲ್ಲಿ ಅವರು ಮಾತನಾಡಿ
ಈ ಹಿಂದೆ ಬೋವಿ, ಸವಿತ, ಅಲ್ಪಸಂಖ್ಯಾತರು, ಎಸ್.ಸಿ,ಎಸ್.ಟಿ.ಸಮುದಾಯಗಳು ಬೆಂಬಲಿಸಿರುವುದು ನನಗೆ ಚುನಾವಣೆಯಲ್ಲಿ ಹೆಚ್ಚಿನ ಸ್ಪೊರ್ತಿ ತಂದಿದೆ. ನಿಮ್ಮ ನಂಬಿಕೆ,ಪ್ರೀತಿ, ವಿಶ್ವಾಸಗಳನ್ನು ಉಳಿಸಿ ಕೊಂಡು ಮುಂದಿನ ೫ ವರ್ಷಗಳ ಕಾಲ ದಿನದ ೨೪ ಗಂಟೆ ನಿಮ್ಮ ಸೇವೆಯನ್ನು ಪ್ರಮಾಣಿಕವಾಗಿ ಮಾಡುತ್ತೇನೆ ಎಂದರು.
ದಲಿತ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಜೆ.ಡಿ.ಎಸ್. ಬೆಂಬಲ ಸೂಚಿಸಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಂದಿ ಸಂಘಟಿತರಾಗಿ ಸಮಾವೇಶಕ್ಕೆ ಅಗಮಿಸಿರುವುದು ಕಂಡು ನನಗೆ ಮುಂದಿನ ಚುನಾವಣೆಯ ಗೆಲುವಿನ ದಿಕ್ಸೂಚಿಯನ್ನು ಇಂದೆ ನೀಡಿದ್ದೀರಿ ಎಂದು ಹರ್ಷ ವ್ಯಕ್ತ ಪಡೆಸಿದರು,
ರಾಜ್ಯದಲ್ಲಿ ಜೆ.ಡಿ.ಎಸ್. ಪಕ್ಷವು ಅಧಿಕಾರಕ್ಕೆ ಬಂದಲ್ಲಿ ೨೪ ಗಂಟೆಯೊಳಗೆ ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಒಂದು ಲಕ್ಷದವರೆಗೆ ಸಾಲ ಸೌಲಭ್ಯ ಮತ್ತು ರೈತರ ಸಾಲ ಮನ್ನ, ವೃದ್ದರಿಗೆ ಮಾಸಿಕವಾಗಿ ೫ ಲಕ್ಷ ರೂ ಪಿಂಚಣಿ,ಕೆ.ಸಿ.ವ್ಯಾಲಿ ೩ನೇ ಹಂತದ ಶುದ್ದಿಕರಣ ಸೇರಿದಂತೆ ಸ್ವಾವಲಂಭಿ ಕರ್ನಾಟಕ ನಿರ್ಮಾಣದ ಗುರಿಯಾಗಿದೆ ಎಂದರು.
ನಾನು ಸ್ಥಳೀಯ ನಿವಾಸಿ ಯಾಗಿದ್ದು, ಸುಲಭವಾಗಿ ಸದಾ ಕಾಲ ಜನರ ಮಧ್ಯೆ ಇರುತ್ತೇನೆ, ನನ್ನ ಅಧಿಕಾರದಲ್ಲಿ ಭ್ರಷ್ಟ ಮುಕ್ತ ಲಂಚ ಮುಕ್ತ ಆಡಳಿತಕ್ಕೆ ಒತ್ತು ನೀಡುತ್ತೇನೆ, ನನಗೆ ಯಾವೂದೇ ಸಂಪತ್ತು ಬೇಡಾ, ದೇವರು ನನಗೆ ದುಡಿಯುವ ಶಕ್ತಿ ನೀಡಿದ್ದಾನೆ ನಿಮ್ಮ ಸ್ವಾವಲಂಭ ಜೀವನ, ನೆಮ್ಮದಿ ಬದುಕಿಗಾಗಿ ನನಗೆ ಮತ ನೀಡ ಬೇಕೆಂದು ಮನವಿ ಮಾಡಿದರು,
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ದಲಿತರ ಬೃಹತ್ ಸಮಾವೇಶ ಇದಾಗಿದ್ದು ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ಸಿ.ಎಂ.ಆರ್. ಶ್ರೀನಾಥ್ ಅವರ ಗೆಲುವು ಬಹುತೇಕ ಖಚಿತವಾಗಿದೆ. ಈ ಹಿಂದೆ ಶ್ರೀನಿವಾಸಗೌಡರಿಗೆ ನೀಡಿದಂತೆ ೪೦ ಸಾವಿರಕ್ಕೂ ಹೆಚ್ಚಿನ ಅಂತರದಲ್ಲಿ ಜೆ.ಡಿ.ಎಸ್. ಗೆಲವು ಕಾಣುವಂತಾಗ ಬೇಕೆಂದು ಆಶಿಸಿದರು,
ಮುಳಬಾಗಿಲಿನ ಸಮೃದ್ದಿ ಮಂಜುನಾಥ್ ಮಾತನಾಡಿ ಭಾರತದಲ್ಲಿ ಹಲವು ರಾಜ್ಯಗಳಲ್ಲಿ ಪ್ರದೇಶಿಕ ಪಕ್ಷಗಳೇ ಆಡಳಿತ ನಡೆಸುತ್ತಿರುವಂತೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಜೆ.ಡಿ.ಎಸ್. ಪಕ್ಷವು ಅಧಿಕಾರಕ್ಕೆ ಬರಲಿದ್ದು ಹೆಚ್.ಡಿ. ಕುಮಾರಸ್ವಾಮಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡ ಬೇಕೆಂದು ಕರೆ ನೀಡಿದರು,
ಜೆ.ಡಿ.ಎಸ್. ಪಕ್ಷವು ಕೇವಲ ಓಟಿಗಾಗಿ ನಿಮ್ಮನ್ನು ಬಳಿಸಿ ಕೊಳ್ಳುವುದಿಲ್ಲ ಅಧಿಕಾರ ನೀಡಿದರೆ ಮುಂದಿನ ೫ ವರ್ಷಗಳ ಕಾಲ ನಿಮ್ಮ ಸೇವೆ ಮಾಡಲಿದೆ. ಈಗಾ ನೀವು ನಮಗಾಗಿ ಇದ್ದೇವೆಂದು ಹೇಳುವ ಹಾಗೆ ಮುಂದೆ ನಿಮ್ಮೊಂದಿಗೆ ಶ್ರೀನಾಥ್ ಅವರು ಇರುತ್ತಾರೆ. ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ ಎಂದರು,
ದೇವನಹಳ್ಳಿಯ ಶಾಸಕ ಇಂಚರ ನಾರಾಯಣಸ್ವಾಮಿ ಮಾತನಾಡಿ ಸ್ವಾತಂತ್ರ್ಯ ಬಂದು ೭೫ ವರ್ಷಗಳಿಂದ ದಲಿತರನ್ನು ಸದ್ವಳಿಸಿ ಕೊಂಡು ವಂಚಿಸುತ್ತಿದ್ದಾರೆ ಹೊರತು ದಲಿತರಿಗೆ ಸಮಾಜಿಕ ನ್ಯಾಯ ಕೊಡಿಸುವಲ್ಲಿ ರಾಷ್ಟ್ರೀಯ ಪಕ್ಷಗಳು ವಿಫಲವಾಗಿದೆ. ಸಮ ಸಮಾಜ ನಿರ್ಮಾಣಕ್ಕೆ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದಾಗ ಮಾತ್ರ ಸಮಾಜದ ಕಡೆಯ ವ್ಯಕ್ತಿಯು ಸಮಾಜದ ಮುಖ್ಯ ವಾಹಿನಿಗೆ ಬರಲು ಅವಕಾಶ ಸಿಗಲಿದೆ ಎಂದು ತಿಳಿಸಿದರು,