ಹುಬ್ಬಳ್ಳಿ,ಜೂ.30: ಉತ್ತರಪ್ರದೇಶದ ಸಹಾರನ್ ಪುರ ಜಿಕೊ ದೇವಬಂದ್ ನಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಅಜಾದ ಅವರ ಮೇಲೆ ಗುಂಡು ಹಾರಿಸಿದವರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ವಿವಿಧ ದಲಿತ ಪರ ಸಂಘಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ನಡೆಸಿ ನಂತರ ತಹಶಿಲ್ದಾರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಪ್ರತಿಭಟನಾಕಾರರು
ಚಂದ್ರಶೇಖರ ಅಜಾದರಂತ ನಾಯಕರು ಒಬ್ಬರು ತಯಾರಾಗಲು ದಶಕಗಳೇ ಬೇಕಾಗುತ್ತದೆ. ನಾಯಕರಾಗುವ ವ್ಯಕ್ತಿ ಒಬ್ಬರೇ ನಾಯಕರಾಗುವುದಿಲ್ಲ. ಸಾವಿರಾರು ಜನ ಹಿಂಬಾಲಕರೊಂದಿಗೆ ಒಬ್ಬ ನಾಯಕ ಸೃಷ್ಟಿಯಾಗುತ್ತಾರೆ.
ಈ ದುರ್ಘಟನೆಗೆ ಕಾರಣರಾದವರು ಯಾರೇ ಆಗಿರಲಿ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಈ ಘಟನೆ ಸಿಬಿಐ ತನಿಖೆಗೆ ಒಳಪಡಿಸಬೇಕು ಹಾಗೂ ಅಜಾದ್ ಅವರಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.