ದಲಿತ ಸಂಘಟನಗಳ ಸಭೆ

ಕೋಲಾರ,ಡಿ.೨: ಹಿರಿಯ ಹೋರಾಟಗಾರ ವೆಂಕಟೇಶ್ ಮನೆಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಭೆ ಸೇರಿ ಅನೇಕ ವಿಚಾರಗಳನ್ನು ಚರ್ಚೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್ ಅವರು, ವೇಮಗಲ್ ಭಾಗದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯನ್ನು ಸ್ಥಾಪನೆ ಮಾಡಿರುವುದು ನನಗೆ ತುಂಬಾ ಸಂತೋಷದ ವಿಚಾರವಾಗಿದೆ, ಇದೇ ರೀತಿ ನೀವುಗಳು ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಹೋಗಬೇಕೆಂದರು.
ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡರುಗಳಾದ ಚನ್ನಪ್ಪನಹಳ್ಳಿ ಮುನಿಯಪ್ಪ, ವೇಮಗಲ್ ಗ್ರಾಮ ಪಂಚಾಯಿತಿ ಸದಸ್ಯರಾದ ರಮೇಶ್, ಪುರಹಳ್ಳಿ ಜಿ ಯಲ್ಲಪ್ಪ, ನಾಗನಾಳ ರಮೇಶ್, ಕಲ್ಕೆರೆ ವಿಜಯಕುಮಾರ್, ನಾಗನಾಳ ಶಂಕರ್, ರಾಂಪುರ ಮುನಿರಾಜು, ಪಡಿಗನಹಳ್ಳಿ ರಾಮಾಂಜಿ, ಕರೇನಹಳ್ಳಿ ಮುನಿರಾಜು, ನಾಹಳ್ಳಿ ಶ್ರೀನಿವಾಸ್, ದೊಡ್ಡವಲ್ಲಬಿ ಮಂಜುನಾಥ್, ಚನಪನಹಳ್ಳಿ ನಾಗರಾಜ್, ರಾಂಪುರ ಆಂಜಿನಪ್ಪ, ಕಲ್ಕೆರೆ ಕೆ.ಟಿ ಮುನಿರಾಜು ಹಾಜರಿದ್ದರು.