ದಲಿತ-ರೈತ ಮುಖಂಡ ಮೇಲೆ ದಾಳಿ- ಕೆ.ಆರ್.ಎಸ್ ಖಂಡನೆ

ಸಿರವಾರ.ನ.೯-ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ, ಸಾಗಾಣಿಕೆ ಮಾಡುವಾಗ ತಡೆಯಲು ಹೋದವರ ಮೇಲೆ ಆಲ್ದಾಳ ವೀರಭಧ್ರಪ್ಪ ಅವರ ಸಹಚರರು ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿರುವುದನ್ನು ಖಂಡಿಸಿದ ಕರ್ನಾಟಕ ರೈತ ಸಂಘವು ಆಲ್ದಾಳ ವಿರಭದ್ರಪ್ಪ ಮೇಲೆ ಸೂಕ್ತ ಕ್ರಮಕೈಗೊಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ನೀಡುವ ಮೂಲಕ ಒತ್ತಾಯಿಸಿದರು.
ಪಟ್ಟಣದ ತಹಸೀಲ್ದಾರ ನೀಡಿದ ಮನವಿ ಪತ್ರದಲ್ಲಿ ಇತ್ತಿಚೇಗೆ ಮಾನ್ವಿ ಪಟ್ಟದಲ್ಲಿ ದಲಿತ ಮುಖಂಡರಾದಬಸವರಾಜನಕ್ಕುಂದಿ ಅವರ ಮೇಲೆ ಆಲ್ದಾಳ ವೀರಭದ್ರಪ್ಪ ಹಾಗೂ ಸಹಚರರು ಕೂಡಿಕೊಂಡು ಮಾರಣಾಂತಿಕ ಹಲ್ಲೆ ಮಾಡಿರುವುದು ಖಂಡನಿಯ, ಈ ಜಗಳ ಬಿಡಿಸಲು ಹೋದ ಕರ್ನಾಟಕ ರೈತ ಸಂಘಟನೆಯ ಮುಖಂಡ ಅಶೋಕ್ ನಿಲೋಗಲ್, ಮಾನ್ವಿ ತಾಲೂಕ ಅಧ್ಯಕ್ಷ ವಿ.ಮುದುಕಪ್ಪ ನಾಯಕ ಅವರಮೇಲೆ ವಿನಾಕಾರಣ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಸಂಘಟನೆ ಮುಖಂಡರ ಮೇಲೆ ಹಾಕಿರುವ ಪ್ರಕರಣವನ್ನು ವಾಪಸ್ ಪಡೆದು, ಆಲ್ದಾಳ ವೀರಭದ್ರಪ್ಪ ಅವರ ಮೇಲೆ ಕ್ರೀಮಿನಲ್ ಪ್ರಕರಣ ದಾಖಲಿಸಿ ಗಡಿ ಪಾರು ಮಾಡಬೇಕು. ಒಂದು ವಾರದೊಳಗೆ ಕ್ರಮಕೈಗೊಳದಿದರೆ ನಮ್ಮ ಸಂಘಟನೆ ಮೂಲಕ ಉಗ್ರ ರೀತಿಯ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ನಾಗರಾಜ ಬೊಮ್ಮನಾಳ, ಉಪಾದ್ಯಕ್ಷ ವಿರೇಶ ನಾಯಕ, ಚಂದ್ರುಹಡಪ್, ಹುಲ್ಲಿಗೇಪ್ಪಮಡಿವಾಳ, ರಮೇಶ ಅಂಗಡಿ, ಚಿದಾನಂದ ಶೇಟಿ, ಗೌರಮ್ಮ, ಮಾರೆಪ್ಪ ಲಕ್ಕಂದಿನ್ನಿ, ಮಲ್ಲಯ್ಯ ಜಕಲದಿನ್ನಿ, ಶಿನಪ್ಪ, ಕಾಶಪ್ಪ, ಗಿರಿಜಮ್ಮ, ಬಸವರಾಜ ಸೇರಿದಂತೆ ಇನ್ನಿತರರು ಇದ್ದರು.