ದಲಿತ ಯುವತಿ ಹತ್ಯೆ, ದುಷ್ಕರ್ಮಿಗಳ ಗಡಿಪಾರಿಗೆ ಒತ್ತಾಯ

ಬಳ್ಳಾರಿ, ಮಾ.29- ಗದಗ ಜಿಲ್ಲೆಯ ನರಗುಂದ ತಾಲೂಕಿನ ದಲಿತ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆಗೈದು ಸುಟ್ಟಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ ಗಡಿಪಾರು ಮಾಡಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಈ ಬಗ್ಗೆ ಇಂದು ರಾಜ್ಯಪಾಲರಿಗೆ ಪತ್ರ ಬರೆದಿರುವ ವೇದಿಕೆ, ಮುಖಂಡರುಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ ದಲಿತರ ಮೇಲೆ ಹಾಡುಹಗಲೇ ಜಾತಿನಿಂದನೆ, ಅವಮಾನ, ದಬ್ಬಾಳಿಕೆ, ದಲಿತ ಮಹಿಳೆಯರ ಮಾನಭಂಗ, ಹತ್ಯೆ ಮೊದಲಾದ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ ದಲಿತ ವಿರೋಧಿಯಾದ ಕಿಡಿಗೇಡಿಗಳ ಕೃತ್ಯಕ್ಕೆ ಸೂಕ್ತವಾದ ಶಿಕ್ಷೆ ಆಗುತ್ತಿಲ್ಲ ಆ ಕಾರಣ ಮತ್ತೆ ಮತ್ತೆ ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ. ಅದಕ್ಕಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಪಾದಿತರಿಗೆ ಉಗ್ರ ಶಿಕ್ಷೆ ವಿಧಿಸಬೇಕು ನೊಂದ ದಲಿತ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ, 5 ಎಕರೆ ಜಮೀನು ಪರಿಹಾರವಾಗಿ ನೀಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಸರಕಾರ ಇದಕ್ಕೆ ಸ್ಪಂದಿಸದಿದ್ದರೆ ಹೋರಾಟದ ಎಚ್ಚರಿಕೆಯನ್ನು ಸಂಘಟನೆಯ ಜಿಲ್ಲಾ ಅಧ್ಯಕ್ಷ ಧರ್ಮಣ್ಣ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ನಂದಿಹಾಳ, ಕಾರ್ಯಧ್ಯಕ್ಷ ಸಿ.ಹನುಮೇಶ, ಖಜಾಂಚಿ ಟಿ.ಶೇಷಪ್ಪ ,ಮುಖಂಡರುಗಳಾದ ಮಲ್ಲಯ್ಯ, ತೆಕ್ಕಲಕೋಟೆ ಎಂ .ಅಂಜನಿ, ಅನ್ವರ್ ಸಾಬ್ ಮೊದಲಾದವರು ನೀಡಿದ್ದಾರೆ