ದಲಿತ ಮುಖ್ಯಮಂತ್ರಿ ಘೋಷಣೆ ಮಾಡಿ : ನಾರಾಯಣ ಸ್ವಾಮಿ

ಕೋಲಾರ,ನ,೧೯-ದಲಿತರನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಣೆ ಮಾಡಿ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲಿ ಎಂದು ಭಾರತೀಯ ದಲಿತ ಸೇನೆಯ ದಲಿತ ನಾರಾಯಣ ಸ್ವಾಮಿ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ತಲೆಮಾರುಗಳಿಂದ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದ್ದೇವೆ. ಆದರೆ, ಈವರೆಗೆ ದಲಿತ ಮುಖ್ಯಮಂತ್ರಿ ಘೋಷಣೆ ಮಾಡಿಲ್ಲ. ಅದು ನಮ್ಮ ಹಲವಾರು ವರ್ಷಗಳ ಕೂಗು, ದಲಿತ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿ ಕೋಲಾರದಲ್ಲಿ ಸ್ಪರ್ಧಿಸಲಿ. ಅದಕ್ಕೆ ಸಿದ್ದರಾನಯ್ಯ ಅವರನ್ನು ಸ್ವಾಗತ ಮಾಡುತ್ತೇವೆ ಎಂದು ತಿಳಿಸಿದರು.
ಕಳೆದ ಬಾರಿ ಖರ್ಗೆ, ಪರಮೇಶ್ವರ, ಮುನಿಯಪ್ಪರನ್ನು ತುಳಿದು ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಘಟಬಂಧನ್ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್.ಮುನಿಯಪ್ಪರನ್ನು ಸೋಲಿಸಿದರು ಎಂದರು. ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದಿದ್ದಕ್ಕೆ ನಾವು ಸ್ವಾಗತಿಸುತ್ತೇವೆ. ಆದರೆ, ದಲಿತರನ್ನು ತುಳಿದು ರಾಜಕೀಯ ಮಾಡಬೇಡಿ ಎಂದು ಹೇಳಿದರು.
ಘಟಬಂಧನ್ ಮಾತ್ರ ಅಲ್ಲ, ಎಲ್ಲರ ವಿಶ್ವಾಸ ಪಡೆದು, ಎಲ್ಲ ಸಮುದಾಯದ ಜನರನ್ನು ವಿಶ್ವಾಸಕ್ಕೆ ಪಡೆದು ಕೋಲಾರಕ್ಕೆ ಬರಬೇಕು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಒತ್ತಾಯಿಸಿದರು.
ಮುಖಂಡ ಕೃಷ್ಣ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಕೆ.ಹೆಚ್. ಮುನಿಯಪ್ಪ ವಿರೋಧ ಅಲೆಯಿಂದ ಬಿಜೆಪಿ ಮುನಿಸ್ವಾಮಿ ಆಯ್ಕೆಯಾದರೇ ಹೊರತಾಗಿ ಘಟಬಂಧನ್‌ನಿಂದ ಮಾತ್ರವಲ್ಲ ಎಂದು ಪ್ರತಿಪಾದಿಸಿದರು,
ಸುದ್ಧಿಗೋಷ್ಠಿಯಲ್ಲಿ ಮಂಜು, ನಾರಾಯಣಪ್ಪ ಇದ್ದರು.