ದಲಿತ ಮುಖಂಡ ನಾಗರಾಜರವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಆಯ್ಕೆ ಸಂತಸದ ವಿಷಯ


ಸಂಜೆವಾಣಿ ವಾರ್ತೆ
ಸಂಡೂರು,:ಜ:19  ಬಳ್ಳಾರಿ ಜಿಲ್ಲಯೆ ಶೊಷಿತ ನಾಯಕ, ದಲಿತ ಮುಖಂಡ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮುಂಡರಗಿ ನಾಗರಾಜ ರವರನ್ನು ಬಳ್ಳಾರಿ ಗ್ರಾಮಾಂತರ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವಂಥಹ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೂ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೂ ಸಂಡೂರು ವಿಧಾನ ಸಭಾ ಕ್ಷೇತ್ರದ ಶಾಸಕರು, ಮಾಜಿ ಸಚಿವರು ಸಿ.ಪಿ.ಎಲ್. ಕಾರ್ಯದರ್ಶಿಗಳಾದ ಈ. ತುಕರಾಂ ರವರಿಗೂ ಮಾಜಿ ಸಚಿವ ಸಂತೊಷ್ ಲಾಡ್ ಎ.ಂ.ಬಿ. ಪಾಟಿಲ್ ಅಲ್ಲಮ ವೀರಭದ್ರಪ್ಪ, ನಾಸಿರ್ ಹುಸೇನ್ ಹಾಗೂ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರಿಗೂ ತಾಲ್ಲೂಕು ಕಾಂಗ್ರೆಸ್ ದಲಿತ ಮುಖಂಡರಿಗೂ ಅಭಿನಂದನೆಗಳನ್ನ ಸಂಡೂರಿನ ಹಸೊಪೇಟೆ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ನಿಂಗಪ್ಪ ಐಹೋಳೆ ಎಲ್.ಎಚ್. ಶಿವಕುಮಾರ ರಾಮಕೃಷ್ಣ ಹೆಗಡೆ, ಎಂ. ಶಿವಲಿಂಗಪ್ಪ, ಯಶವಂತನಗರದ ಎಚ್. ಕುಮಾರಸ್ವಾಮಿ, ಎಚ್. ತಿಪ್ಪೇಸ್ವಾಮಿ, ಗಂಗಾಧರ ಹೊಸಳ್ಳಿ, ರಾಮಸ್ವಾಮಿ ಗ್ರಾ.ಪಂ. ಸದಸ್ಯರು ಹೊಸಳ್ಳಿ, ಗಣೇಶ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಬ್ರೂಸ್ಲೆ ಉಪಾಧ್ಯಕ್ಷರು, ಕಾಶಪ್ಪ ಲಕ್ಷ್ಮೀಪುರ ಮುದ್ದಣ್ಣ ಮಾಜಿ ಪುರಸಭಾ ಸದಸ್ಯ ತಿಮ್ಮಪ್ಪ ಕೃಷ್ಣಾನಗರ ಇವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.