ದಲಿತ ಮುಖಂಡ ಕೃಷ್ಣಪ್ಪರಿಗೆ ನಮನ

ಕೋಲಾರ,ಮೇ.೧: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕರಾದ ಮಹಾತ್ಮ ಪ್ರೊ.ಬಿ ಕೃಷ್ಣಪ್ಪನವರ ೨೩ನೇ ಪರಿನಿರ್ವಾಣ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿತ ಕೋಲಾರ ಜಿಲ್ಲಾ ಸಮಿತಿಯ ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಬಿ ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಹೃದಯಸ್ಪರ್ಶಿ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಬಿ ಕೃಷ್ಣಪ್ಪ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟು ಶೋಷಿತರ ದನಿಯಾಗಿ ನಾಡಿನುದ್ದಕ್ಕೂ ಸಂಚರಿಸಿ ಶೋಷಿತರ ಗುಡಿಸಲುಗಳಲ್ಲಿ ಹೋರಾಟದ ಹಣತೆ ಹಚ್ಚಿದ್ದೇನೆ ಆರದಂತೆ ಕಾಪಾಡಿಕೊಳ್ಳಿ ಎಂಬ ಮಾರ್ಮಿಕವಾದ ಸಂದೇಶ ನೀಡಿ ನಮ್ಮೆಲ್ಲರಲ್ಲಿ ಜಾಗೃತಿ ಮೂಡಿಸಿದ ಧೀಮಂತ ನಾಯಕ ಪ್ರೊ. ಬಿ ಕೃಷ್ಣಪ್ಪ ರವರು ದಿನಾಂಕ ೨೯,೪, ೧೯ ೯೭ ರಂದು ಗದಗ ದಸಂಸ ವತಿಯಿಂದ ಹಮ್ಮಿಕೊಂಡ ಡಾ ಬಿಆರ್ ಅಂಬೇಡ್ಕರ್ ಅವರ ಹೋರಾಟ ರಥ ಮುನ್ನಡೆ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಗದಗ ನಗರಕ್ಕೆ ಬಂದಾಗ ಆಕಸ್ಮಿಕ ಹೃದಯಾಘಾತಕ್ಕೊಳಗಾಗಿ ದಿನಾಂಕ ೩೦, ೪.೧೯ ೯ ೭ರಂದು ಪರಿನಿಬ್ಬಾಣ ಹೊಂದಿರುವುದು ಅತ್ಯಂತ ದುಃಖಕರ ಸಂಗತಿ ಅಷ್ಟೇ ಅಲ್ಲ ಒಬ್ಬ ಧೀಮಂತ ನಾಯಕ, ಸ್ವಾಭಿಮಾನದ ತಂದೆಯನ್ನು ಕಳೆದುಕೊಂಡಂತಾಗಿದೆ ಎಂದು ಗದ್ಗದಿತರಾಗಿ ಮಾತನಾಡಿದ ಅವರು, ಅವರ ಹೋರಾಟ,ಅಂಬೇಡ್ಕರ್ ತತ್ವಸಿದ್ಧಾಂತಗಳು ನಮಗೆಲ್ಲಾ ಸ್ಪೂರ್ತಿಯಾಗಲಿ ಎಂದು ಕೋರಿದರು