ದಲಿತ ಮುಖಂಡರಿಂದ ಪತ್ರಕರ್ತ ಅಶೋಕಗೆ ಸನ್ಮಾನ

ಮಾನ್ವಿ ಆ ೦೧ :- ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಅಶೋಕ ತಡಕಲ್ ಇವರಿಗೆ ತಾಲೂಕಿನ ಅನೇಕ ದಲಿತ ಸಂಘಟನೆಯ ಮುಖಂಡರು ಪತ್ರಿಕಾ ಭವನದಲ್ಲಿ ಸನ್ಮಾನಿಸಿ ಗೌರವಿಸಿದರು..
ನಂತರ ಸಮಾಜದ ಮುಖಂಡ ಜೆ ಎಚ್ ದೇವರಾಜ, ಯಮುನಪ್ಪ ಜಾ ಪನ್ನೂರು, ಮಾತನಾಡಿ ಸಣ್ಣ ವಯಸ್ಸಿನಲ್ಲಿ ಜಿಲ್ಲಾ ಉತ್ತಮ ಪತ್ರಕರ್ತ ಎಂದು ಪ್ರಶಸ್ತಿ ಪಡೆದಿದ್ದು ತುಂಬಾ ಖುಷಿಯ ವಿಚಾರವಾಗಿದ್ದು ಮುಂದಿನ ದಿನಗಳಲ್ಲಿ ಅವರು ಇನ್ನೂ ಅತ್ಯುತ್ತಮ ವರದಿಗಳನ್ನು ಬರೆದು ಸಮಾಜಕ್ಕೆ ಮಾದರಿಯಾಗಲಿ ಇನ್ನೂ ದೊಡ್ಡ ಮಟ್ಟದ ಪ್ರಶಸ್ತಿಗಳು ಅವರಿಗೆ ಬರಲಿ ಎಂದು ಶುಭ ಹಾರೈಸಿದರು..
ಈ ಸಂದರ್ಭದಲ್ಲಿ ಮಾದಿಗ ದಂಡೋರ ತಾ ಅಧ್ಯಕ್ಷ ರವಿಕುಮಾರ್ ಮದ್ಲಾಪೂರು, ಹಿರಿಯ ಮುಖಂಡರಾದ ಪ್ರವೀಣಕುಮಾರ, ಆಕಾಶ ಮ್ಯಾತ್ರೀ,ಶಿವರಾಜ ದೊಡ್ಡಿ, ಪ್ರದೀಪ ಕಪಗಲ್, ಮಹಾತೇಶ ನಾಯಕ, ಶರೀಫ್ ಸೇರಿದಂತೆ ಅನೇಕರಿದ್ದರು.