ದಲಿತ ಮುಖಂಡನ ಹತ್ಯೆ ಖಂಡಿಸಿ ಪ್ರತಿಭಟನೆ

ರಾಯಚೂರು, ನ.೦೩- ದಲಿತ ಮುಖಂಡ ಪ್ರಸಾದ್ ಭೀಕರ ಕೊಲೆಯನ್ನು ಖಂಡಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆ ಒಕ್ಕೂಟ ಸಮತಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನ ಪ್ರತಿಭಟನೆ ನಡೆಸಿದರು.
ದೇಶ ಮತ್ತು ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ರಾಜ್ಯ ಸರಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿವೆ. ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಅ.೩೦ ರಂದು ಮಾನ್ವಿ ತಾಲೂಕಿನ ಮದ್ಲಾಪೂರು ಗ್ರಾಮದ ದಲಿತ ಮುಖಂಡ ಪ್ರಸಾದ್ ಅವರನ್ನು ಸುತ್ತುವರೆದು ಮಾರಕಾಸ್ತ್ರಗಳಿಂದ ಕೈಗಳನ್ನು ತುಂಡು ಮಾಡಿ ಗುತ್ತಿಗೆಯನ್ನು ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಕಗ್ಗೋಲೆಯು ಮಾನ್ವಿ ತಾಲೂಕಿನ ಅಕ್ಕಿ ಮತ್ತು ಮರಳಿನ ಆಕ್ರಮ ದಂಧೆಗೆ ದಲಿತ ಸಮುದಾಯದ ಪ್ರಸಾದ್. ಅವರ ವ್ಯವಹಾರಕ್ಕೆ ಅಡ್ಡಿಯಾಗಿದ್ದಾನೆಂದು ಭಯದಿಂದ ಈತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾಡಳಿತವು ಮದ್ಲಾಪೂರು ಪ್ರಸಾದ್‌ನನ್ನು ಕೊಲೆಗೈದವರಿಗೆ ಕಠಿಣ ಶಿಕ್ಷೆಯಾಗುವಂತೆ, ಕೊಲೆಗಾರರ ಜೊತೆ ಪೊಲೀಸ್ ಇಲಾಖೆ ಶಾಮೀಲಾಗದಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸಬೇಕು. ಅಕ್ಕಿ ವ್ಯಾಪಾರಿ ಅಲ್ಲಳ್ ವೀರಭದ್ರಪ್ಪ ಬಂಧನ ಮಾಡಬೇಕು ಮತ್ತು ದೇವ ತಂದೆ ಯಂಕಪ್ಪ ಇವರನ್ನು ಸಹ ಬಂಧಿಸಬೇಕು.
ಪ್ರಸಾದ್ ಮರಣದಿಂದ ಅನಾಥವಾದ ಆತನ ಕುಟುಂಬಕ್ಕೆ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಮತ್ತು ಭೂ ಒಡೆತನ ಯೋಜನೆಯಲ್ಲಿ ೦೪ ಎಕರೆ ಭೂಮಿಯನ್ನು ಒದಗಿಸಬೇಕು.
ಪ್ರಸಾದ್ ಕೊಲೆ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾದ ಸುಮಿತ್ರರವರಿಗೆ ಪೊಲೀಸ್ ಇಲಾಖೆ ರಕ್ಷಣೆಯನ್ನು ಒದಗಿಸಬೇಕು.
ಮಾನವಿ ತಾಲೂಕಿನಲ್ಲಿ ಮಾಫಿಯ, ಗೂಂಡಾಗಿರಿಯಿಂದ ಪ್ರಕ್ಷಬ್ಬುವಾತವರಣಕ್ಕೆ ಕಾರಣವಾದ ಅಕ್ರಮ ಮರಳು ಮತ್ತು ಅಕ್ಕಿ ದಂಧೆ ಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಈ ಸಂದರ್ಭದಲ್ಲಿ ಎಂ ಈರಣ್ಣ, ಹೇಮರಾಜ ಆಸ್ಕಿಹಾಳ್, ಜೆ. ಬಿ ರಾಜು, ಎಸ್. ಮಾರೆಪ್ಪ, ಎಂ, ಆರ್ ಭೇರಿ, ಆಂಜಿನೇಯ, ಆಂಜನೇಯ ಕಲವಳದೊಡ್ಡಿ, ಶ್ರೀನಿವಾಸ್ ಕೊಪ್ಪರ, ಮುತ್ತಪ್ಪ, ನರಸಿಂಹಲು, ರಾಜಪ್ಪ, ಕೆ. ಯಲ್ಲಪ್ಪ, ವೈ ನರಸಪ್ಪ,ಜಿ. ಎಲ್ ಆನಂದ ಸೇರಿದಂತೆ ಉಪಸ್ಥಿತರಿದ್ದರು.