
ಮಾನ್ವಿ,ಮಾ.೨೫- ರಾಜ್ಯ ದಲಿತ ಸಮುದಾಯದ ಬಹು ದಿನಗಳ ಬೇಡಿಕೆಯಾದ ಪ್ರತ್ಯೇಕ ಮೀಸಲಾತಿ ಎ ಜೆ ಸದಾಶಿವ ಆಯೋಗ ಕಾಯ್ದೆಯನ್ನು ಬಿಜೆಪಿಯ ರಾಜ್ಯಸರ್ಕಾರ ಶಿಫಾರಸ್ಸು ಮಾಡಿ ಎಡಗೈ ೬% ಬಲಗೈ ೫.೫% ಬೋವಿ ಲಂಬಾಣಿ ೪.೫ ಇತರೆ ೧% ಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಿ ಎಲ್ಲ ಸಮುದಾಯಕ್ಕೆ ನ್ಯಾಯ ದೊರಕುವಂತೆ ಮಾಡಿದೆ ಎಂದು ಮಾಜಿ ಶಾಸಕ ಗಂಗಾಧರ ನಾಯಕ ಹೇಳಿದರು.
ಪಟ್ಟಣದ ಬಸವವೃತ್ತದಲ್ಲಿ ಬಿಜೆಪಿಯ ದಲಿತ ಮೋರ್ಚ್ ಸಹಯೋಗದೊಂದಿಗೆ ನಡೆದ ದಲಿತ ಪ್ರತ್ಯೇಕ ಮೀಸಲಾತಿ ನೀಡಿರುವ ರಾಜ್ಯ ಸರ್ಕಾರ ಜನಪರ ಕಾಳಜಿಯನ್ನು ಹೊಂದಿದೆ ಎಂದು ಜಯಘೋಷವನ್ನು ಕೂಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಬಸವಂತಪ್ಪ, ಶರಣಪ್ಪಗೌಡ ನಕ್ಕುಂದಿ, ಬಸವರಾಜ ನಕ್ಕುಂದಿ, ಮಂಜುನಾಯಕ, ಚಂದ್ರು ನಾಯಕ,ಹನುಮಂತ ಸೀಕಲ್, ನರಸಪ್ಪ ಜೂಕೂರು, ಬಾಸ್ಕರ್ ಜಗ್ಲಿ, ಚಂದ್ರ ಜಾನೇಕಲ್, ವಿ ಜನಾರ್ದನ, ಶ್ರೀಕಾಂತ್ ಗೂಳಿ, ಬೀಮಣ್ಣ ಹರವಿ, ಎಂ ಲಕ್ಷ್ಮಣ್, ಹನುಮಂತರಾಯ ಬಲ್ಲಟಿಗಿ, ಮರಿಸ್ವಾಮಿ, ಕುಮಾರಸ್ವಾಮಿ ಮ್ಯಾದರ್, ಹನುಮಂತ ಕರಡಿಗುಡ್ಡ, ಸೇರಿದಂತೆ ಅನೇಕರು ಇದ್ದರು.